ಅನುಭಾವದ ಸಾರವೆ ನಿಜಸಾರವಾಗಿ
ನಿಂದನೆಮ್ಮ ಬಸವಯ್ಯನು.
ವಿವೇಕದ ಸಂಗವೆ ನಿಜಸಂಗವಾಗಿ
ನಿಂದನೆಮ್ಮ ಬಸವಯ್ಯನು.
ಭಾವದ ಬಯಲಿಂಗೆ ಬಣ್ಣವಿಟ್ಟನೆಮ್ಮ ಬಸವಯ್ಯನು.
ಇತರೇತರ ಮಾರ್ಗವಳಿದು,
ಗಮನ ನಾಸ್ತಿಯಾದನೆಮ್ಮ ಬಸವಯ್ಯನು.
ಸಂಗಯ್ಯನಲ್ಲಿ ಉಭಯಕುಳನಾಸ್ತಿಯಾದನೆಮ್ಮ
ಬಸವಯ್ಯನು.
Transliteration Anubhāvada sārave nijasāravāgi
nindanem'ma basavayyanu.
Vivēkada saṅgave nijasaṅgavāgi
nindanem'ma basavayyanu.
Bhāvada bayaliṅge baṇṇaviṭṭanem'ma basavayyanu.
Itarētara mārgavaḷidu,
gamana nāstiyādanem'ma basavayyanu.
Saṅgayyanalli ubhayakuḷanāstiyādanem'ma
basavayyanu.