•  
  •  
  •  
  •  
Index   ವಚನ - 49    Search  
 
ಆರ ಸಂಗವೂ ಸ್ವಯವಲ್ಲವೆನಗೆ, ಆರ ಹಂಗೂ ಸ್ವಯವಲ್ಲವೆನಗೆ, ಆರ ಸಂಗವ ಮಾಡಿ ನಾನು ಎಷ್ಟೆಷ್ಟು ಕಾಲ ಬಳಲ್ವೆನಯ್ಯ? ಎನ್ನ ಸಂಗವಿಹಪರದ ಹಂಗಿನ ಸಂಗವಲ್ಲಯ್ಯ. ಎನ್ನ ಸಂಗ ಸ್ವಯಲಿಂಗ ಸಂಬಂಧವಯ್ಯ ಸಂಗಯ್ಯ.
Transliteration Āra saṅgavū svayavallavenage, āra haṅgū svayavallavenage, āra saṅgava māḍi nānu eṣṭeṣṭu kāla baḷalvenayya? Enna saṅgavihaparada haṅgina saṅgavallayya. Enna saṅga svayaliṅga sambandhavayya saṅgayya.