•  
  •  
  •  
  •  
Index   ವಚನ - 52    Search  
 
ಆವಾವ ಕಾಲದಲ್ಲಿಯೂ ಎನಗೆ ಎಮ್ಮವರೆ ಗತಿಮತಿಗಳಯ್ಯ. ಆವಾವ ಕಾಲದಲ್ಲಿಯೂ ಎನಗೆ ಪ್ರಾಣಲಿಂಗಿಗಳ ಸಂಗವಲ್ಲದೆ ಮತ್ತೊಂದನೊಲ್ಲೊನಯ್ಯ. ಇಹಪರದ ಹಂಗಿಲ್ಲದವಳಿಗೆ ಕಾಯಕ ಕಪಟನಾಟಕವುಂಟೆ ಸಂಗಯ್ಯ?
Transliteration Āvāva kāladalliyū enage em'mavare gatimatigaḷayya. Āvāva kāladalliyū enage prāṇaliṅgigaḷa saṅgavallade mattondanollonayya. Ihaparada haṅgilladavaḷige kāyaka kapaṭanāṭakavuṇṭe saṅgayya?