ಇಪ್ಪೆಯ ಹೂವನನುಗೊಳಿಸಲು ಇಪ್ಪೆ ಹಿಪ್ಪೆಯಾಯಿತ್ತು.
ಸರ್ಪನ ಶಿರ ಕಂಠದಲ್ಲಿ ಮೂಗುತಿಯ ಸರಗೊಳಿಸಿದೆನಯ್ಯಾ.
ನಾವಲ್ಲಿದ್ದಡೇನು, ನಾವಿಲ್ಲಿದ್ದಡೇನು?
ನಮ್ಮ ನಮ್ಮ ಸಂಸರ್ಗದಲ್ಲಿ
ನಿರುಪಮಾಕಾರಮೂರ್ತಿಗಳಾಗಿ
ನಿರವಯವನೈದಿ ನಿಜಸುಖಿಗಳಾದೆವು.
ಬಸವನಲ್ಲಿ ಎಮಗೆ ತೆರಪಿಲ್ಲವಯ್ಯಾ, ಅಪ್ಪಣ್ಣಾ,
ಭಾವಶೂನ್ಯಳು ನಾನು ಸಂಗಯ್ಯಾ.
Transliteration Ippeya hūvananugoḷisalu ippe hippeyāyittu.
Sarpana śira kaṇṭhadalli mūgutiya saragoḷisidenayyā.
Nāvalliddaḍēnu, nāvilliddaḍēnu?
Nam'ma nam'ma sansargadalli
nirupamākāramūrtigaḷāgi
niravayavanaidi nijasukhigaḷādevu.
Basavanalli emage terapillavayyā, appaṇṇā,
bhāvaśūn'yaḷu nānu saṅgayyā.