ಎನಗೇನೂ ತೋರದಂದು
ನಮ್ಮವ್ವೆಯ ಮಗನಾಗಿದ್ದ ನಮ್ಮ ಬಸವಯ್ಯನು.
ಎನಗೇನೂ ಕಾಣಿಸದಂದು
ಹುಟ್ಟಿಸುವ ಕರ್ತನಾಗಿದ್ದ ನಮ್ಮ ಬಸವಯ್ಯನು.
ಸಂಗ ನಿಸ್ಸಂಗವಿಲ್ಲದಂದು
ಸಮಯಾಚಾರಿಯಾಗಿದ್ದ ನಮ್ಮ ಬಸವಯ್ಯನು.
ತನು ಮನ ಧನವಿಲ್ಲದಂದು
ನಿರೂಪ ರೂಪ ಮಾಡಿದನಯ್ಯಾ
ಸಂಗಯ್ಯಾ, ನಿಮ್ಮ ಬಸವಯ್ಯನು.
Transliteration Enagēnū tōradandu
nam'mavveya maganāgidda nam'ma basavayyanu.
Enagēnū kāṇisadandu
huṭṭisuva kartanāgidda nam'ma basavayyanu.
Saṅga nis'saṅgavilladandu
samayācāriyāgidda nam'ma basavayyanu.
Tanu mana dhanavilladandu
nirūpa rūpa māḍidanayyā
saṅgayyā, nim'ma basavayyanu.