ಎಪ್ಪತ್ತೈದು ಸಾವಿರದಲ್ಲಿ ಇಪ್ಪತ್ತೊಂದು ಪ್ರಾಣ
ಆ ಪ್ರಾಣದ ಮಧ್ಯದಲ್ಲಿ ಮನೋಹರಮೂರ್ತಿ ಇರವಿರಲು,
ಆ ಇರದ ಸುಖವ ನೋಡ ಹೋದರೆ
ನೋಡ ನೋಡಲು ಬಯಲಾಯಿತ್ತು
ಸಂಗಯ್ಯ ಆ ರೂಪು.
Transliteration Eppattaidu sāviradalli ippattondu prāṇa
ā prāṇada madhyadalli manōharamūrti iraviralu,
ā irada sukhava nōḍa hōdare
nōḍa nōḍalu bayalāyittu
saṅgayya ā rūpu.