•  
  •  
  •  
  •  
Index   ವಚನ - 100    Search  
 
ಎಲೆ ಶರಣರಿರಾ, ಎಲೆ ಭಕ್ತರಿರಾ, ಭಕ್ತಿ ಕಾಂಡದ ಮೂಲಿಗನ ಕಾಣಿರೆ ಬಸವನ? ಆ ಭಕ್ತಿಯ ಸಂಗದ ಶಿವೈಕ್ಯನ ಕಾಣಿರೆ ಬಸವನ? ಭಕ್ತಿಯ ನಿಜಸಮಾಧಿಯ ಸುಖವ ಕರುಣಿಸುವ ಅಯ್ಯ ಬಸವನ, ಸಂಗಯ್ಯನ ಪ್ರಸಾದಿಯಾದ ಬಸವನ ಕಾಣಿರೆ ಭಕ್ತರು.
Transliteration Ele śaraṇarirā, ele bhaktarirā, bhakti kāṇḍada mūligana kāṇire basavana? Ā bhaktiya saṅgada śivaikyana kāṇire basavana? Bhaktiya nijasamādhiya sukhava karuṇisuva ayya basavana, saṅgayyana prasādiyāda basavana kāṇire bhaktaru.