ಎಸಳದಳವನಳಿದು ನಿಂದ ಬಸವಾ,
ದಳರೂಪಿತದಲ್ಲಿ ಕುರುಹಡಗಿದ ಬಸವಾ,
ಕುರುಹಿನ ರೂಪ ಕಂಡು ದೃಢ ಸ್ವರೂಪನರಿದು
ಅನುಭಾವಿಯಾಗಿ ಅನುಭಾವದಿಂದ ಮುಕ್ತಿಯ ಕಂಡು
ಮುಖವಿಕಸಿತವನೆಯ್ದಿ ನಿಂದನಯ್ಯ
ಸಂಗಯ್ಯನಲ್ಲಿ ಬಸವಯ್ಯನು.
Transliteration Esaḷadaḷavanaḷidu ninda basavā,
daḷarūpitadalli kuruhaḍagida basavā,
kuruhina rūpa kaṇḍu dr̥ḍha svarūpanaridu
anubhāviyāgi anubhāvadinda muktiya kaṇḍu
mukhavikasitavaneydi nindanayya
saṅgayyanalli basavayyanu.