ಎಸೆವಕ್ಷರಕ್ಕೆ ಹೆಸರಿಲ್ಲ, ಆ ಹೆಸರಿಂಗೆ ರೂಹಿಲ್ಲ;
ರೂಪಿಂಗೆ ನಿರೂಪಿಲ್ಲ.
ನಿರೂಪಳಿದು ನಿರಾಕುಳವಾಗಿ
ನೀರ ಸಂಗಕ್ಕೆ ಹೋದರೆ,
ಆ ನೀರು ಬಯಲಾಳವ
ತೋರಿತ್ತಯ್ಯ ಸಂಗಯ್ಯ.
Transliteration Esevakṣarakke hesarilla, ā hesariṅge rūhilla;
rūpiṅge nirūpilla.
Nirūpaḷidu nirākuḷavāgi
nīra saṅgakke hōdare,
ā nīru bayalāḷava
tōrittayya saṅgayya.