ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ
ಪುಣ್ಯವಿಲ್ಲದ ಪಾಪಿಯ?
ನಾನು ಇಹಪರಕ್ಕೆ ದೂರಳಯ್ಯಾ.
ಎನ್ನ ನಾಮ ಹೆಣ್ಣು ನಾಮವಲ್ಲಯ್ಯಾ.
ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ,
ಸಂಗಯ್ಯನಲ್ಲಿ ಬಸವನ ವಧುವಾದ ಕಾರಣ
ಎನಗೆ ಹೆಣ್ಣುನಾಮವಿಲ್ಲವಯ್ಯಾ.
Transliteration Ēkenna puṭṭisideyayyā heṇṇu janmadalli
puṇyavillada pāpiya?
Nānu ihaparakke dūraḷayyā.
Enna nāma heṇṇu nāmavallayyā.
Nānu siriyidda vastuvina vadhuvāda kāraṇa,
saṅgayyanalli basavana vadhuvāda kāraṇa
enage heṇṇunāmavillavayyā.