ಏಣನ ಗರಳ, ಎಸಳಗಂಗಳ ಸಾರಂಗ,
ಪ್ರಭೆಯನೊಳಕೊಂಡ ಮೊಲ,
ಈ ಮೂರು ಮೃಗವನೆಚ್ಚು ಬಾಣಸವ ಮಾಡಿ,
ಸಂಗಯ್ಯಂಗಿತ್ತು ಸುಖಿಯಾದನಯ್ಯಾ.
ಬಸವನಗಣಿತಮೂರ್ತಿಯಯ್ಯಾ,
ಇಹಪರ ನಾಯಕನು.
Transliteration Ēṇana garaḷa, esaḷagaṅgaḷa sāraṅga,
prabheyanoḷakoṇḍa mola,
ī mūru mr̥gavaneccu bāṇasava māḍi,
saṅgayyaṅgittu sukhiyādanayyā.
Basavanagaṇitamūrtiyayyā,
ihapara nāyakanu.