ಏನೂ ಏನೂ ಎನಲಿಲ್ಲ
ಎನ್ನ ಭಕ್ತಿಯಳಿದ ಭಾವಕ್ಕೆ ಇನ್ನೇನೂ ಏನೂ ಎನಲಿಲ್ಲ.
ಎನ್ನ ಪ್ರಾಣದ ಹಂಗಹರಿದಬಳಿಕ
ಇನ್ನೇನೂ ಏನೂ ಎನಲಿಲ್ಲ.
ಎನ್ನೈಕ್ಯದ ಸಮರಸ ಕೈಗೂಡಿದಬಳಿಕ
ಇನ್ನೇನೂ ಏನೂ ಎನಲಿಲ್ಲ.
ಎನ್ನಭಿಮಾನದ ಕರ್ತು ನಿರಾಳದಲ್ಲಿ ನಿಂದ ಬಳಿಕ,
ಸಯದಾನ ಸುಯಿದಾನವಾಯಿತ್ತಯ್ಯಾ, ಸಂಗಯ್ಯಾ.
Transliteration Ēnū ēnū enalilla
enna bhaktiyaḷida bhāvakke innēnū ēnū enalilla.
Enna prāṇada haṅgaharidabaḷika
innēnū ēnū enalilla.
Ennaikyada samarasa kaigūḍidabaḷika
innēnū ēnū enalilla.
Ennabhimānada kartu nirāḷadalli ninda baḷika,
sayadāna suyidānavāyittayyā, saṅgayyā.