ಒಡಲಳಿದ ಕಾರಣ ಒಡಲಿಲ್ಲದ ಹೆಣ್ಣು
ನಾನಾದೆನಯ್ಯಾ ಬಸವಾ,
ಪ್ರಾಣವಿಲ್ಲದ ಪಂಚಾಕ್ಷರಿಯ ತಿಳಿಯಲು.
ಆ ಪಂಚಾಕ್ಷರಿಯನರಿದು ಆನು ಬದುಕಿದೆನಯ್ಯಾ ಬಸವಾ.
ಗಮನ ನಿರ್ಗಮನ ಸೂಚನೆಯಾಯಿತ್ತು.
ಸಂಗಯ್ಯನಲ್ಲಿ ಹೃದಯದ ಕತ್ತಲೆಯಳಿದು
ಹೃದಯ ಪ್ರಸನ್ನೆಯಾದೆನಯ್ಯಾ ಬಸವಯ್ಯಾ.
Transliteration Oḍalaḷida kāraṇa oḍalillada heṇṇu
nānādenayyā basavā,
prāṇavillada pan̄cākṣariya tiḷiyalu.
Ā pan̄cākṣariyanaridu ānu badukidenayyā basavā.
Gamana nirgamana sūcaneyāyittu.
Saṅgayyanalli hr̥dayada kattaleyaḷidu
hr̥daya prasanneyādenayyā basavayyā.