ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ.
ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ.
ಆ ಕಲ್ಯಾಣ ಕೈಲಾಸವಾಯಿತ್ತು ಬಸವಾ.
ಆ ಕಲ್ಯಾಣವಳಿದು ಕೈಲಾಸವಾದ ಬಳಿಕ,
ಬಸವನ ಮೂರ್ತಿಯಿಲ್ಲ.
ಬಸವನ ಮೂರ್ತಿಯನರಿಯದ ಕಾರಣ
ಕೈಲಾಸವಿಲ್ಲ ಕಲ್ಯಾಣವಿಲ್ಲವಯ್ಯಾ, ಸಂಗಯ್ಯಾ.
Transliteration Kalyāṇavilla kailāsavilla, basavā.
Kalyāṇavillada kāraṇa kailāsavillavenage, basavā.
Ā kalyāṇa kailāsavāyittu basavā.
Ā kalyāṇavaḷidu kailāsavāda baḷika,
basavana mūrtiyilla.
Basavana mūrtiyanariyada kāraṇa
kailāsavilla kalyāṇavillavayyā, saṅgayyā.