ಕಲಿಯುಗದಲ್ಲಿ ಹುಟ್ಟಿ
ಆ ಕಲಿಯುಗದಲ್ಲಿ ಬೆಳೆದೆನಯ್ಯ.
ಕೃತಯುಗದಲ್ಲಿ ಹುಟ್ಟಿ
ಆ ಕೃತಯುಗದಲ್ಲಿ ಬೆಳೆದೆನಯ್ಯ.
ದ್ವಾಪರದಲ್ಲಿ ಹುಟ್ಟಿ ಆ ದ್ವಾಪರದಲ್ಲಿಯೆ ಬೆಳೆದೆನಯ್ಯ.
ತ್ರೇತಾಯುಗದಲ್ಲಿ ಹುಟ್ಟಿ
ಆ ತ್ರೇತಾಯುಗದಲ್ಲಿಯೆ ಬೆಳೆದೆನಯ್ಯ.
ಎನಗೆ ಪ್ರಾಣವಿಲ್ಲ ಎನಗೆ ಕಾಯವಿಲ್ಲ.
ನಾನೇತರಲ್ಲಿಯೂ ಹೊಂದಿದವಳಲ್ಲ.
ಅಜಾತನ ಕಲ್ಪಿತ ಸಂಬಂಧವಾಗಲು
ಆನು ನಿಮ್ಮೈಕ್ಯದಲ್ಲಿ ನಿಂದೆನಯ್ಯ ಸಂಗಯ್ಯ.
Transliteration Kaliyugadalli huṭṭi
ā kaliyugadalli beḷedenayya.
Kr̥tayugadalli huṭṭi
ā kr̥tayugadalli beḷedenayya.
Dvāparadalli huṭṭi ā dvāparadalliye beḷedenayya.
Trētāyugadalli huṭṭi
ā trētāyugadalliye beḷedenayya.
Enage prāṇavilla enage kāyavilla.
Nānētaralliyū hondidavaḷalla.
Ajātana kalpita sambandhavāgalu
ānu nim'maikyadalli nindenayya saṅgayya.