ಕಾಮದ ಹಂಗಿಗನಲ್ಲ ಶರಣ,
ಮೋಹದ ಇಚ್ಫೆಯವನಲ್ಲ ಶರಣ,
ಉಭಯದ ಸಂಗದವನಲ್ಲ ಶರಣ,
ಪ್ರಾಣದ ಕುರುಹಿಲ್ಲದ ಶರಣಂಗೆ
ಪ್ರಸಾದದ ನೆಲೆಯಿಲ್ಲವಯ್ಯ.
ಎನಗೇನೂ ತಲೆದೋರದೆ ಮುಸುಕಿಟ್ಟು
ಬಸವಳಿದೆನಯ್ಯಾ ಸಂಗಯ್ಯ ನಿಮ್ಮಲ್ಲಿ.
Transliteration Kāmada haṅgiganalla śaraṇa,
mōhada icpheyavanalla śaraṇa,
ubhayada saṅgadavanalla śaraṇa,
prāṇada kuruhillada śaraṇaṅge
prasādada neleyillavayya.
Enagēnū taledōrade musukiṭṭu
basavaḷidenayyā saṅgayya nim'malli.