ಕೋಪದ ತಾಪದ ಸಂಗವ ಕಳೆದು
ವಿರೂಪ ನಿರೂಪವಾಯಿತ್ತಯ್ಯಾ.
ನಿರಾಲಂಬ ನಿರಾಭಾರಿಯಾಗಿರಲು
ಆನು ಅನುವರಿದು
ಹೆಣ್ಣೆಂಬ ನಾಮವ ಕಳೆದು ಸುಖ
ವಿಶ್ರಾಂತಿಯನೆಯ್ದುವೆನಯ್ಯಾ.
ಸಂಗಯ್ಯಾ, ಬಸವನರೂಪವಡಗಿತೆನ್ನಲ್ಲಿ.
Transliteration Kōpada tāpada saṅgava kaḷedu
virūpa nirūpavāyittayyā.
Nirālamba nirābhāriyāgiralu
ānu anuvaridu
heṇṇemba nāmava kaḷedu sukha
viśrāntiyaneyduvenayyā.
Saṅgayyā, basavanarūpavaḍagitennalli.