ಜನನ ಮರಣವಳಿದು, ಜನ್ಮದೊಪ್ಪವ ಕಳೆದು,
ಪ್ರಸನ್ನಮೂರ್ತಿಯ ಕಂಡು ಪ್ರಭಾಪೂರಿತ ಸ್ವರೂಪವಾಗಿ,
ಮನೋವಿಲಾಸದ ಹಂಗು ಹರಿದು,
ಅಂಗ ಲಿಂಗ ನಿಜವು ಮೂರ್ತಿಯಾಗಿ
ಹೊಳೆಯಲು ಸಂಗ ಸಂಬಂಧ
ಶಿವಾನುಕೂಲತೆಯಾಯಿತ್ತಿಂದು ಸಂಗಯ್ಯ.
Transliteration Janana maraṇavaḷidu, janmadoppava kaḷedu,
prasannamūrtiya kaṇḍu prabhāpūrita svarūpavāgi,
manōvilāsada haṅgu haridu,
aṅga liṅga nijavu mūrtiyāgi
hoḷeyalu saṅga sambandha
śivānukūlateyāyittindu saṅgayya.