ಠಾವಿಲ್ಲ, ಆ ಠಾವಿಂಗೆ ಆ ಠಾವೆ ಮೂಲವಾಯಿತ್ತು.
ಮೂಲವಡಗಿದ ರೂಪಿಂಗೆ ಮುಕ್ತಳಾದೆನು.
ಮುನ್ನಲೊಂದು ಸುಖವ ಕಂಡು ಮೂಲಾಧಾರ ರೂಪವರಿದು.
ಎನಗೆ ಪ್ರಣವ ಸ್ವರೂಪೇ ಸಾಧ್ಯವಾಯಿತ್ತು.
ನಾನು ಹೆಣ್ಣು ರೂಪವಳಿದು
ಮುಕ್ತ್ಯಂಗನೆಯಾದೆನಯ್ಯ ಸಂಗಯ್ಯ.
Transliteration Ṭhāvilla, ā ṭhāviṅge ā ṭhāve mūlavāyittu.
Mūlavaḍagida rūpiṅge muktaḷādenu.
Munnalondu sukhava kaṇḍu mūlādhāra rūpavaridu.
Enage praṇava svarūpē sādhyavāyittu.
Nānu heṇṇu rūpavaḷidu
muktyaṅganeyādenayya saṅgayya.