ತನುವಾವುದಯ್ಯಾ ಬಸವಾ?
ಮನವಾವುದಯ್ಯಾ ಬಸವಾ?
ನೆನಹಿನ ಪರಿಣಾಮವಾವುದಯ್ಯಾ ಬಸವಾ?
ಉಭಯದ ಗುಣ ನಷ್ಟವಾದ ಬಳಿಕ,
ಪ್ರಸನ್ನಸುಖಭಾವವುಂಟೆ ಸಂಗಯ್ಯನ ಗುರುಬಸವಾ.
Transliteration Tanuvāvudayyā basavā?
Manavāvudayyā basavā?
Nenahina pariṇāmavāvudayyā basavā?
Ubhayada guṇa naṣṭavāda baḷika,
prasannasukhabhāvavuṇṭe saṅgayyana gurubasavā.