ಪಯಣವಿಲ್ಲದೆ ಗಮನವ ಕಂಡವರುಂಟೆ?
ಗತಿಯಿಲ್ಲದೆ ಪೂಜೆಯ ಮಾಡಿದವರುಂಟೆ?
ಹೊಲನಿಲ್ಲದೆ ಫಲವನುಂಡವರುಂಟೆ?
ಮೃಗವಿಲ್ಲದೆ ಬೇಂಟೆಯನಾಡಿದವರುಂಟೆ?
ಅರಸಿಯಿಲ್ಲದೆ ಅರಸಾದವರುಂಟೆ?
ಸಂಗಯ್ಯ, ಮುಖವಿಲ್ಲದ
ಪ್ರಸಾದವನುಂಡವರುಂಟೆ?
Transliteration Payaṇavillade gamanava kaṇḍavaruṇṭe?
Gatiyillade pūjeya māḍidavaruṇṭe?
Holanillade phalavanuṇḍavaruṇṭe?
Mr̥gavillade bēṇṭeyanāḍidavaruṇṭe?
Arasiyillade arasādavaruṇṭe?
Saṅgayya, mukhavillada
prasādavanuṇḍavaruṇṭe?