ಪರಮನ ಹಂಗು, ಪ್ರಾಣದ ಸಂಗ
ಉಂಟೆಂದೆನಲಿಲ್ಲ ಬಸವಾ.
ಪರಶಿವನ ವಿಲಾಸದಲ್ಲಿರಲೊಂದುದಿನ
ಬಸವಾ ಎಂಬ ಮೂರಕ್ಷರವ ಕಂಡೆ.
ಬಸವಾ ಎಂಬ ಮೂರಕ್ಷರವ ಕಂಡು,
ಪ್ರಾಣಲಿಂಗಸಂಬಂಧಿಯಾದೆನು ನಾನು ಬಸವಾ.
ಆ ಪ್ರಣವದ ಹೊಳಹನರಿಯಹೋದಡೆ,
ಆ ಬೆಳಗು ಅಲ್ಲಿ ಕಾಣಬಂದಿತ್ತಯ್ಯಾ ಬಸವಾ.
ಸಂಗಯ್ಯಾ, ಸ್ವಯಲಿಂಗಸಂಬಂಧಿಯಾನಾದೆನು.
Transliteration Paramana haṅgu, prāṇada saṅga
uṇṭendenalilla basavā.
Paraśivana vilāsadalliralondudina
basavā emba mūrakṣarava kaṇḍe.
Basavā emba mūrakṣarava kaṇḍu,
prāṇaliṅgasambandhiyādenu nānu basavā.
Ā praṇavada hoḷahanariyahōdaḍe,
ā beḷagu alli kāṇabandittayyā basavā.
Saṅgayyā, svayaliṅgasambandhiyānādenu.