ಪಾರ್ವತಿಯ ರೂಪ ಕಂಡು ಪರಶಿವನ ಸಂಗ ನಿಸ್ಸಂಗವಾಗಿ,
ತಾಯಿಮಗನಂಗದಿಂದ ತನುವಳಿದು ನಿರಾಭಾರರೂಪವನೆಯ್ದಿ,
ಬಸವನ ಅನುಭವದಿಂದ ವಿವರವ ಕಂಡು
ವಿಚಾರ ಪತ್ನಿಯಾದೆನಯ್ಯಾ ಸಂಗಯ್ಯಾ.
Transliteration Pārvatiya rūpa kaṇḍu paraśivana saṅga nis'saṅgavāgi,
tāyimaganaṅgadinda tanuvaḷidu nirābhārarūpavaneydi,
basavana anubhavadinda vivarava kaṇḍu
vicāra patniyādenayyā saṅgayyā.