ಪ್ರಣವದ ಹೆಸರಿಲ್ಲ ಬಸವಂಗೆ.
ಪ್ರಣವದ ಕುರುಹಿಲ್ಲ ಬಸವಂಗೆ.
ಪ್ರಣವದ ನೆಲೆಯಿಲ್ಲ ಬಸವಂಗೆ.
ಪ್ರಣವದ ರೂಪಿಲ್ಲ ಬಸವಂಗೆ.
ಪ್ರಣವವನೋದಿ ಮೊದಲಿಲ್ಲ ಬಸವಂಗೆ
ಪ್ರಣವಕ್ಕೆ ಅಪ್ರಮಾಣನಾದ ನಮ್ಮ ಬಸವನು ಸಂಗಯ್ಯಾ.
Transliteration Praṇavada hesarilla basavaṅge.
Praṇavada kuruhilla basavaṅge.
Praṇavada neleyilla basavaṅge.
Praṇavada rūpilla basavaṅge.
Praṇavavanōdi modalilla basavaṅge
praṇavakke apramāṇanāda nam'ma basavanu saṅgayyā.