ಬಸವಾ, ಹಂಗನಳಿದೆ ನಾ ನಿಮ್ಮ ಬಸವಾ.
ನಿಸ್ಸಂಗಿಯಾನಾದೆನಯ್ಯಾ ಬಸವಾ.
ಮುಖ ವಿಮುಖವಾಯಿತ್ತು.
ಬಸವನಿರವನರಿದು ಬಯಲಾನುಭಾವದಿಂದ
ಮಾತಿನ ಮುಖವನರಿದು,
ಬಸವನ ಬಯಲವಿಚಾರವ ತಿಳಿದು ಭ್ರಮೆಯನಳಿದು
ಆನು ಬದುಕಿದೆನಯ್ಯಾ ಸಂಗಯ್ಯಾ.
Transliteration Basavā, haṅganaḷide nā nim'ma basavā.
Nis'saṅgiyānādenayyā basavā.
Mukha vimukhavāyittu.
Basavaniravanaridu bayalānubhāvadinda
mātina mukhavanaridu,
basavana bayalavicārava tiḷidu bhrameyanaḷidu
ānu badukidenayyā saṅgayyā.