ಬಹಿರಂಗದಾರೋಗಣೆಯ ರುಚಿಯನರಿಯಬಾರದು
ಏನು ಕಾರಣವೋ ಲಿಂಗಯ್ಯ?
ಅಂತರಂಗದಾರೋಹಣೆಯ ಮಹಂತನೇ
ಬಲ್ಲನೋ ಲಿಂಗಯ್ಯ.ಅರಿದು ಮರದವಂ ವಿರೋಧನೆ?
ಸಜ್ಜನಕ್ಕೆ ಉಪಸಾಕ್ಷಿಯುಂಟೇ ಲಿಂಗಯ್ಯಾ?
ಅರುಹು ಸೋಂಕಿದ ಬಳಿಕ
ನೋಡಲಿಲ್ಲ ಕೂಡಲಿಲ್ಲ ಸಂಗಯ್ಯನ.
Transliteration Bahiraṅgadārōgaṇeya ruciyanariyabāradu
ēnu kāraṇavō liṅgayya?
Antaraṅgadārōhaṇeya mahantanē
ballanō liṅgayya.Aridu maradavaṁ virōdhane?
Sajjanakke upasākṣiyuṇṭē liṅgayyā?
Aruhu sōṅkida baḷika
nōḍalilla kūḍalilla saṅgayyana.