ಬ್ರಹ್ಮದ ನೆಮ್ಮುಗೆಯನಳಿದೆ
ಭಾವದ ಸೂತಕವ ಕಳೆದೆ
ಎನಗೆ ಹಿತವರಿಲ್ಲದೆ ನಾನಳಿದೆ.
ಏನಯ್ಯ ಏನಯ್ಯವೆಂಬ ಶಬ್ದವಿಂದಿಂಗೆ ಬಯಲೆ
ಪರಿಣಾಮದ ಸುಖ ಬ್ರಹ್ಮದಲ್ಲಿಯಡಕವೆ ಎನಗೆ?
ಹುಟ್ಟಿಲ್ಲ ಹೊಂದಿಲ್ಲದ ಮೂರ್ತಿಯಾದೆನೆ.
ಸಂಗಯ್ಯ, ಬಸವನ ಕೂಡಿ ಎನ್ನ ಕಾಯವ ನಾನಳಿದೆನೆ.
Transliteration Brahmada nem'mugeyanaḷide
bhāvada sūtakava kaḷede
enage hitavarillade nānaḷide.
Ēnayya ēnayyavemba śabdavindiṅge bayale
pariṇāmada sukha brahmadalliyaḍakave enage?
Huṭṭilla hondillada mūrtiyādene.
Saṅgayya, basavana kūḍi enna kāyava nānaḷidene.