ಭಕ್ತಿಪ್ರಸಾದ, ಮುಕ್ತಿಪ್ರಸಾದ,
ಇಹಪರಪ್ರಸಾದದ ನೆಲೆಯ ಕಂಡು ಸುಖಿಸಿದೆವೆಂಬರು.
ತಾವರಿಯದ ವಿವರ ತಮಗೆಲ್ಲಿಯದೊ?
ಸಂಗಯ್ಯನಲ್ಲಿ ಬಸವ ಕಾಯರಹಿತನಲ್ಲದೆ
ಮತ್ತಾರನೂ ಕಾಣೆನಯ್ಯಾ.
Transliteration Bhaktiprasāda, muktiprasāda,
ihaparaprasādada neleya kaṇḍu sukhisidevembaru.
Tāvariyada vivara tamagelliyado?
Saṅgayyanalli basava kāyarahitanallade
mattāranū kāṇenayyā.