ಮುಕ್ತಿಯನಳಿದು ನಿರ್ಮುಕ್ತಳಾದ ಕಾರಣ
ಮುಕ್ತಿಯಿಲ್ಲವಯ್ಯಾ ಬಸವಯ್ಯಾ ಎನಗೆ.
ಸಂಗ ನಿಸ್ಸಂಗದವಳಾದ ಕಾರಣ
ಎನಗೆ ಸಂಗದ ಸಂಗವಿಲ್ಲವಯ್ಯಾ ಬಸವಯ್ಯಾ.
ನನಗೇತರ ಪರಿಣಾಮದ ಕೂಟಪ್ರಭೆ?
ವಿರೂಪಾಕ್ಷಸಂಗವನನುಭವಿಸಿದೆನಯ್ಯಾ
ಬಸವಯ್ಯಾ. ಸಂಗಯ್ಯಾ, ಬಸವ
ವರ ಪ್ರಣವಸ್ವರೂಪನಾಯಿತ್ತು.
Transliteration Muktiyanaḷidu nirmuktaḷāda kāraṇa
muktiyillavayyā basavayyā enage.
Saṅga nis'saṅgadavaḷāda kāraṇa
enage saṅgada saṅgavillavayyā basavayyā.
Nanagētara pariṇāmada kūṭaprabhe?
Virūpākṣasaṅgavananubhavisidenayyā
basavayyā. Saṅgayyā, basava
vara praṇavasvarūpanāyittu.