ಮುಯ್ಯೂರ ಮನೆಯೊಳಗೆ ನಾನು ಸಂಸಾರವ ಮಾಡುತ್ತಿರಲು,
ಮೂವರು ದಿಬ್ಬಣಿಗರು ಬಂದು
ಮುಖಕನ್ನಡಿಯ ತೋರಿ ಮುದ್ದುಗೈಯಲು
ಆನು ಮೂಲಪ್ರಣವಸ್ವರೂಪಳಾದೆನು.
ಹಿತಪತಿಸುತನ್ಯಾಯದಂತೆ
ಅಪ್ರತಿಮನ ಸುಖಕ್ಕೆ ಮನವನಿಂಬುಗೊಟ್ಟು
ಆನು ಉರಿಯುಂಡ ಕರ್ಪೂರದಂತೆ ತೆರಹಿಲ್ಲದಿರ್ದೆನಯ್ಯಾ
ಸಂಗಯ್ಯ ನಿಮ್ಮಲ್ಲಿ, ಬಸವಯ್ಯನೆನ್ನಲ್ಲಿ ಅಡಗಲು.
Transliteration Muyyūra maneyoḷage nānu sansārava māḍuttiralu,
mūvaru dibbaṇigaru bandu
mukhakannaḍiya tōri muddugaiyalu
ānu mūlapraṇavasvarūpaḷādenu.
Hitapatisutan'yāyadante
apratimana sukhakke manavanimbugoṭṭu
ānu uriyuṇḍa karpūradante terahilladirdenayyā
saṅgayya nim'malli, basavayyanennalli aḍagalu.