ಮೂರ್ತಿಯ ಸಂಗ ಮೂರಡಿಗೊಂಡಿತ್ತು.
ಆ ಮೂರ್ತಿಯ ಸಂಗ ನಿಸ್ಸಂಗವಾಯಿತ್ತು.
ಹೇಳಬಾರದ ಘನವ
ಆರಿಗೂ ಹೇಳದ ವಸ್ತುವ ಕಂಡು ಹೆಸರಿಲ್ಲದೆ ನಿಂದೆ ನಾನು.
ಪ್ರಣವಾಕ್ಷರದ ಕುರುಹ ಕಂಡು ಪರವಶಳಾದೆನಯ್ಯ.
ಏಕಾಕ್ಷರದ ಸಂಗ ನಿಸ್ಸಂಗವಾಯಿತ್ತಯ್ಯ ಸಂಗಯ್ಯ.
Transliteration Mūrtiya saṅga mūraḍigoṇḍittu.
Ā mūrtiya saṅga nis'saṅgavāyittu.
Hēḷabārada ghanava
ārigū hēḷada vastuva kaṇḍu hesarillade ninde nānu.
Praṇavākṣarada kuruha kaṇḍu paravaśaḷādenayya.
Ēkākṣarada saṅga nis'saṅgavāyittayya saṅgayya.