ಯತಿಯರ ಮನವನತಿ ವಿರತಾಕಾರವ ಮಾಡಿ ಕಂಡೆನಯ್ಯ.
ಆ ಯತಿಗಳು ಅತಿ ವೀರ ಸಂಬಂಧಿಗಳಾಗಿರಲು
ವೀರತತ್ವದ ನೆಲೆಯೊಂದೊಂದು
ಸಂಗವನೈದಿ ಮುಖವಿಕಸಿತವಾಯಿತ್ತು.
ಅಪ್ಪಣ್ಣ ತಂದ ಅಪ್ರತಿಮ ಶಿವಾಚಾರ ನೆಲೆಯಾಗಿರಲು
ಆನು ಶಿವ ಶುಭವಂತಳಾದೆನಯ್ಯಾ.
ಸಂಗಯ್ಯನಲ್ಲಿ ಬಸವನ ಭ್ರಮೆ ನಮಗೇಕಯ್ಯಾ.?
Transliteration Yatiyara manavanati viratākārava māḍi kaṇḍenayya.
Ā yatigaḷu ati vīra sambandhigaḷāgiralu
vīratatvada neleyondondu
saṅgavanaidi mukhavikasitavāyittu.
Appaṇṇa tanda apratima śivācāra neleyāgiralu
ānu śiva śubhavantaḷādenayyā.
Saṅgayyanalli basavana bhrame namagēkayyā.?