ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
ಮಾಡುವ ಮಾಟವಳಿಯಿತ್ತು ಬಸವಾ.
ಇಂದಿಗೆ ಊಟವಳಿಯಿತ್ತು ಬಸವಾ.
ಇಂದಿಂಗೆ ಅವರ ಸಂಗವಳಿದು
ನಿರಾಲಂಬಮೂರ್ತಿಯ ಇರವು ಕಾಣಿಸಿತಯ್ಯಾ ಬಸವಾ,
ಸಂಗಯ್ಯಾ, ಬಸವನ ರೂಪು ಎನ್ನಲ್ಲಿ ಅಡಗಲು.
Transliteration Lakṣada mēle tombattārusāvira jaṅgamakke
māḍuva māṭavaḷiyittu basavā.
Indige ūṭavaḷiyittu basavā.
Indiṅge avara saṅgavaḷidu
nirālambamūrtiya iravu kāṇisitayyā basavā,
saṅgayyā, basavana rūpu ennalli aḍagalu.