ಸುವೀರವಾದಡಾಗಲಿ
ಸಮಯಾಚಾರವಾದಡಾಗಲಿ
ಸಂಗಪ್ರಸಾದ ನಿಸ್ಸಂಗವಾಗಿ
ಸಮಯಾನಂದದೊಳಗೆ ನಿಂದು
ಪರಿಣಾಮಿಯಾನಾದೆನು.
ಪರಿಣಾಮವಡಗಿ ಪ್ರಭೆಯನಳಿದು
ಮುಕ್ತಿಯ ಕಂಡು ಮುಖವಡಗಿ
ನಾನು ಭಸಿತ ವಿಶುದ್ಧವಡಗಿದೆನಯ್ಯ ಸಂಗಯ್ಯ.
Transliteration Suvīravādaḍāgali
samayācāravādaḍāgali
saṅgaprasāda nis'saṅgavāgi
samayānandadoḷage nindu
pariṇāmiyānādenu.
Pariṇāmavaḍagi prabheyanaḷidu
muktiya kaṇḍu mukhavaḍagi
nānu bhasita viśud'dhavaḍagidenayya saṅgayya.