ಸ್ವಯಸಮರಸದ ಇರವನಂಗವಿಸಿ
ತತ್ತ್ವವಡಗಿ ನಿಃಶೂನ್ಯವ ತಿಳಿದು
ನಿಃಶೂನ್ಯ ಶಬ್ದವ ಕಂಡು ನಿಃಶಬ್ದ ಶಬ್ದವಾಗಿ
ಶಬುದಾಚಾರವನರಿದೆನಯ್ಯ.
ಅರಿವ ಮರದು ಕುರುಹಳಿದು
ವಿಚಾರ ಮನ ನಷ್ಟವ ಮಾಡಿದೆನಯ್ಯ.
ನಷ್ಟದ ಮಾತನೊಂದು ರೂಪಮಾಡಿ
ಆ ರೂಪು ಉರಿಯುಂಡಿತ್ತಯ್ಯ ಸಂಗಯ್ಯ.
Transliteration Svayasamarasada iravanaṅgavisi
tattvavaḍagi niḥśūn'yava tiḷidu
niḥśūn'ya śabdava kaṇḍu niḥśabda śabdavāgi
śabudācāravanaridenayya.
Ariva maradu kuruhaḷidu
vicāra mana naṣṭava māḍidenayya.
Naṣṭada mātanondu rūpamāḍi
ā rūpu uriyuṇḍittayya saṅgayya.