•  
  •  
  •  
  •  
Index   ವಚನ - 4    Search  
 
ಪಿಂಡಜ್ಞಾನಸ್ಥಲ - ಪುನರ್ಜನ್ಮ
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದೊಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ. ಪ್ರಥಮ ಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿ ಎನ್ನನಿರಿಸಿಕೊಂಡಿರ್ದಿರಯ್ಯಾ. ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ. ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ. ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ಸರ್ವಕಾಲ ಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ. ಏಳನೆಯ ಭವಾಂತರದಲ್ಲಿ ಬಸವನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲ ಸಂಗಮದೇವಾ ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ.
Transliteration Ayyā, ēḷēḷu janmadalli śivabhaktanāgi bāradirdoḍe nim'māṇe, nim'ma pramatharāṇe! Nim'ma prasādakkallade bāydereyenayyā. Prathama bhavāntaradalli śilādanemba gaṇēśvarana māḍi hesariṭṭu karedu nim'ma bhr̥tyana māḍi ennanirisikoṇḍirdirayyā. Eraḍaneya bhavāntaradalli skandanemba gaṇēśvarana māḍi hesariṭṭu karedu nim'ma kāruṇyava māḍirisikoṇḍirdirayyā. Mūraneya bhavāntaradalli nīlalōhitanemba gaṇēśvarana māḍi hesariṭṭu karedu nim'ma līlāvinōdadindirisikoṇḍirdirayyā. Nālkaneya bhavāntaradalli manōharanemba gaṇēśvarana māḍi hesariṭṭu karedu nim'ma manaḥprērakanāgalendirisikoṇḍirdirayyā. Aidaneya bhavāntaradalli kālalōcananemba gaṇēśvarana māḍi hesariṭṭu karedu sarvakālasanhārava māḍisuttirdirayyā. Āraneya bhavāntaradalli vr̥ṣabhanemba gaṇēśvarana māḍi hesariṭṭu karedu nimagēralu vāhanavāgalendirisikoṇḍirdirayyā. Ēḷaneya bhavāntaradalli basavanemba gaṇēśvarana māḍi hesariṭṭu karedu nim'ma okkuda mikkudakke yōgyanāgalendirisikoṇḍirdirayyā. Idu kāraṇa kūḍala saṅgamadēvā nīvu barisida bhavāntaradalli nānu barutirdenayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Ayya Yelelu Janumadali Album/Movie: Vachana Gaanambudhi Singer: Ravindra Soragavi Music Director: Devendra Kumar Mudhol Lyricist: Basavanna Music Label : Lahari Music
English Translation 2 Thy curse on me, Lord, thy Ancients' curse, If I came not in seven births As Śiva 's devotee! I do not care for any food Except Thy grace. In my first birth, thou madest me Gaṇēśvara,Śīlada by name, Calling me by my name, To keep me as thy servant-man. In my second birth, thou madest me Gaṇēśvara, Skanda by name, Calling me by my name, To harbour me in thy Grace. In my third birth, thou madest me Gaṇēśvara, Manōhara by name, Calling me by my name, To make me ever to destroy. In my sixth birth,thou madest me Gaṇēśvara,Vr̥ṣabha by name, As carrier for thee to ride. In my seveeral birth,thou madest me Gaṇēśvara,Basava by name, Calling me bymy name, To make me fit For what is offered,what left over. Therefore,I have come to birth As often as thou mad'st me come, O Lord Kūḍala Saṅgama ! Translated by: L M A Menezes, S M Angadi
Hindi Translation प्रभो, सात सात जन्मों में मैं शिवभक्त होकर न आया, तो तव सौगंध, तव प्रमथों की सौगंध है । तव प्रसादार्थ मुँह खोलता हूँ, अन्यथा नहीं प्रथम भवांतर में तुम ने मुझे गणेश्वर बनाकर शिलाद नाम से बुलाया और अपना भृत्य बना रखा, द्वितीय भवांतर में मुझे गणेश्वर बनाकर स्कंद नाम से बुलाया और अपने कृपाश्रय में रखा, तृतीय भवांतर में मुझे गणेश्वर बनाकर नीललोहित नाम से बुलाया और निज लीला-विनोद में रखा; चतुर्थ भवांतर में मुझे गणेश्वर बनाकर मनोहर नाम से बुलाया और निज मनःप्रेरक बना रखा; पंचम भवांतर में मुझे गणेश्वर बनाकर; काललोचन नाम से बुलाया और सर्वकाल संहारार्थ रखा; षष्टम भवांतर में मुझे गणेश्वर बनाकर; वृषभ नाम से बुलाया और आरोहणार्थ वाहन बना रखा; सप्तम भवांतर में मुझे गणेश्वर के रूप में बनाकर; बसव नाम से बुलाया और अपने शेष प्रसाद के योग्य बना रखा, अतः कूडलसंगमदेव, तुमने जिस भवांतर में आने दिया मैं आता रहा ॥ Translated by: Banakara K Gowdappa
Telugu Translation రాకున్న నీ యాన; నీ ప్రమధుల యాన! అయ్యా, ఏడేడు జన్మల శివభక్తుడనై రాకున్న నీ యాన; నీ ప్రమధుల యాన! నీ ప్రసాదమునకు కాని నోర్విప్పనయ్యా, ప్రధమ భవాంతరమున శిలాదుడను గణేశ్వరునిచేసి పేరిడి పిలిచి నీ భృత్యునిగా నన్ను నిల్పుకొంటివికదయ్యా రెండవ భవాంతరమున స్కందుడను గణేశ్వరుని చేసి పేరిడి పిలిచింది మీ కారుణ్యమును చూపి నను నిల్పుకొంటివి అయ్యా మూడవ భవాంతరమున నీలలోహితుడను గణేశ్వరునిచేసి పేరిడి పిలిచి లీలావినోదమునకై నిల్పుకొంటివికదయ్యా నాల్గవ భవాంతరమున మనోహరుడను గణేశ్వరునిచేసి పేరిడి పిలిచి నీ మనః ప్రేరకునిగా నిల్పుకొంటివికదయ్యా ఐదవ భవాంతరమున కాలలోచనుడను గణేశ్వరునిచేసి పేరిడి పిలిచి సతత సంహారంబు సేయించుచుంటిగదయ్యా, ఆరవ భవాంతరమున వృషభుడను గణేశ్వరుని చేసి పేరిడి పిలిచి నీ యెక్కడి వాహనముగా నన్ను నిల్పుకొంటి గదయ్యా గణేశ్వరునిచేసి పేరిడి పిలి నీ ప్రసాదమందయోగ్యునిగా నన్ను నిల్పుకొంటిగదయ్యా కూడల సంగమదేవా; నీవు రమ్మను భవాంతరమునకీ కారణమున వచ్చుచుంటినయ్యా! Translated by: Dr. Badala Ramaiah
Tamil Translation ஐயனே, ஏழேழுபிறவியிலே சிவனடியானாய் வாராதுழி. உம்மாணை, உம் சிவகணங்களின் ஆணை! உமது திருவமுதுக்கின்றி வாய் திறவேனையனே. முதற் பிறவியிலே சிலாதனெனும் பெயரிய கணேச்சுரனாக்கி உம் தொண்டனாயென்னை யிட்டீரையனே. இரண்டாம் பிறவியிலே கந்தனெனும் பெயரிய கணேச்சுரனாக்கி உம்மருள் செய்திட்டீரையனே. மூன்றாம் பிறவியிலே. நீலலோகிதனெனும் பெயரிய கணேச்சுரனாக்கி உம் திருவிளையாடலா லிட்டீரையனே. நான்காம் பிறவியிலே மனோகரனெனும் பெயரிய கணேச்சுரனாக்கி உம் மனங்கவர்ந்தவனா யிட்டீரையனே. ஐந்தாம் பிறவியிலே காலலோசனனெனும் பெயரிய கணேச்சுரனாக்கி அனைத்துக்கால அழிவினைச் செய்வித்தீரையனே. ஆறாம் பிறவியிலே ஆனேறெனும் பெயரிய கணேச்சுரனாக்கி நீரேறுதற்கு ஊர்தியா யிட்டீரையனே. ஏழாம் பிறவியிலே பசவனெனும் பெயரிய கணேச்சுரனாக்கி உம் அடியவரேற்ற அமுதைப் பெரும் தக்கோனா யிட்டீரையனே. இதன் பொருட்டு கூடலசங்கமதேவனே. நீர் வருவித்த பிறவியிலே நான் வந்துற்றே னையனே. Translated by: Smt. Kalyani Venkataraman, Chennai
Marathi Translation देवा, सात जन्मात शिवभक्त होऊन जन्माला आलो नाही तर तुमची शपथ, तुमच्या प्रमथांची शपथ. आपल्या प्रसादाविना कशाची इच्छा करत नाही. प्रथम जन्मामध्ये, शिलाद गणेश्वर नावाने हाक मारली. आपला सेवक बनवून मला ठेवून घेतले. दुसऱ्या जन्मामध्ये, स्कंद गणेश्वर करुन, मला बोलावले. तुमची कारुण्यकृपा करून ठेवून घेतले. तिसऱ्या जन्मामध्ये, निललोहित गणेश्वरनावाने हाक मारली. तुमच्या लिलाविनोदासाठी मला ठेवून घेतले. चौथ्या जन्मामध्ये, मनोहर गणेश्वर करुन, नावाने हाक मारली. तुमच्या मन प्रेरणेसाठी मला ठेवून घेतले. पाचव्या जन्मामध्ये, काललोचन गणेश्वर करुन, नावाने हाक मारली. सर्व कालसंहारासाठी मला ठेवून घेतले. सहाव्या जन्मामध्ये, वृषभ गणेश्वर करुन, नावाने हाक मारली. तुम्हाला बसण्यास वाहन करुन ठेवून घेतले. सातव्या जन्मामध्ये, बसवण्णा गणेश्वर करुन, नावाने हाक मारली. तुमच्या शेषप्रसादाला योग्य होण्यासाठी मला ठेवून घेतले म्हणून कूडलसंगमदेवा, तुमच्या इच्छेनुसार मी येथे जन्म घेत होतो. Translated by Shalini Sreeshaila Doddamani
ಶಬ್ದಾರ್ಥಗಳು ನೀಲಲೋಹಿತ = ಮನೋಹರ; ಪ್ರಮಥ = ಶರಣ; ಭವಾ = ಜನನ, ಮರಣ ರೂಪದ ಸಂಸಾರ; ಭೃತ್ಯ = ಸೇವಕ; ಸ್ಕಂದ = ಷಣ್ಮುಖ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ಶಿವಕೈಂಕರ್ಯವನ್ನು ಜನ್ಮಜನ್ಮಾಂತರಗಳಲ್ಲಿ-ಶಿವನ ಕೃಪೆಯಿಂದಲೆ, ಅವನ ಗಣೇಶ್ವರನಾಗಿದ್ದುಕೊಂಡೇ ಮಾಡುತ್ತ ಬಂದಿರುವುದಾಗಿಯೂ, ಈ ಜನ್ಮದಲ್ಲೂ ಆ ಶಿವಕೃಪೆಗೆ ತಾವು ಪಾತ್ರವಾಗಿರುವುದಾಗಿಯೂ ಬಿನ್ನಹಮಾಡಿಕೊಂಡಿರುವರು ಈ ವಚನದಲ್ಲಿ. ಜನ್ಮಜನ್ಮಾಂತರದ ಆ ಶಿವಸೇವಾ ಫಲವಾಗಿಯೇ ಈ ಜನ್ಮದಲ್ಲೂ ಶಿವಕೃಪೆ ತಮಗಾಗಿದೆಯೆಂಬ ನಂಬಿಕೆ ಬಸವಣ್ಣನವರಿಗೆ. ಈ ವಿಧವಾದ ಶಿವಚಿಂತೆ-ಶಿವಕೈಂಕರ್ಯಕ್ಕೆ ಮೂರ್ತರೂಪ “ಗಣೇಶ್ವರ”. ವೀರಶೈವದಲ್ಲಿ ಗಣಂಗಳೆಂದರೆ ಬಹಳ ಪೂಜ್ಯ-ಶಿವನ ಪರಿವಾರದವರು. ಅವರನ್ನು ಮುಖ್ಯವಾಗಿ ಪ್ರಮಥಗಣ-ರುದ್ರಗಣ ಎಂದು ವಿಭಾಗಿಸುವುದುಂಟು. ಈ ಪ್ರಮಥ-ರುದ್ರಗಣಂಗಳು ಕೈಲಾಸದ ಪ್ರಜೆಗಳು. ಭೂಮಿಯಲ್ಲಿ ಶಿವನ ಅಂಶದಿಂದ ಅವತರಿಸಿ ಶೈವವನ್ನು ಉದ್ಧಾರಮಾಡಿ ಮರಳಿ ಕೈಲಾಸವಾಸಿಗಳಾದ ಮುಕ್ತ ಜೀವರನ್ನೂ ಗಣಂಗಳೆಂದೇ ಕರೆಯುವುದು ರೂಢಿಯಲ್ಲಿದೆ-ವೃಷಭಗಣ (28), ತ್ರಿಷಷ್ಟಿಪುರಾತನಗಣ (63), ಷೋಡಶಗಣ (16), ತೇರಸಗಣ (13), ದಶಗಣ (10) ಎಂದು. ಇವರೆಲ್ಲರೂ ಬಸವಪೂರ್ವದವರು. ಅಲ್ಲಿಂದೀಚೆಗೆ ಸಂಖ್ಯೆಯಲ್ಲಿ ಬೆಳೆಯುತ್ತಲೇ ಬಂದಿರುವ ಬಸವಾದಿಪ್ರಮಥರನ್ನು ಅಸಂಖ್ಯಾತಗಣವೆಂದಿರುವುದು ಅನ್ವರ್ಥವಾಗಿಯೇ ಇದೆ. ಪ್ರಸ್ತುತ ವಚನದಲ್ಲಿ ಬಸವಣ್ಣನವರು ಹೆಸರಿಸಿರುವ ಶಿಲಾದಜ-ಸ್ಕಂದ-ನೀಲಲೋಹಿತ-ಮನೋಹರ-ಕಾಲಲೋಚನ-ವೃಷಭ ಎಂಬ ಆರು ಜನರು ಗಣಸಾಮಾನ್ಯರುಗಳೆಲ್ಲ-ಕೈಲಾಸದ ಗಣನಾಯಕರು. ಗುರುತರ ಕಾರ್ಯಗಳನ್ನು ನಿರ್ವಹಿಸಲೋಸುಗ ಇವರು ಶಿವನಿಂದ ಆಗಾಗ್ಗೆ ನಿಯೋಜಿತರಾದವರು. ಶಿಲಾದಜನೆಂದರೆ ನಂದಿ-ಇವನು ಎಲ್ಲ ಶಿವಗಣಗಳ ಅಗ್ರಣಿ. ವೃಷಭನೆಂದರೆ ಧರ್ಮಸ್ವರೂಪಿ-ಇವನೇ ಮಹೇಶ್ವರನಿಗೆ ವಾಹನವಾದವನು. ಸ್ಕಂದನು ತ್ರಿಪುರ ಸಂಹಾರಮಾಡಿದವನು. ನೀಲಲೋಹಿತನು ಗಿರಿಜಾವಿವಾಹವನ್ನು ನಿರ್ವಹಿಸಿದನು. ಮನೋಹರನು ಶಿವಭಾವಪ್ರಚಾರಕನಾಗಿದ್ದವನು. ಕಾಲಲೋಚನನು ಅಂಧಕಾಸುರವಧೆ ಮಾಡಿದವನು. ಈ ಗಣೇಶ್ವರರಿಗೂ ಶಿವನಿಗೂ ಇದ್ದ ಸಂಬಂಧವೇ ಪುರಾತನಕಾಲದಿಂದಲೂ ತಮಗೂ ಶಿವನಿಗೂ ಇದ್ದ ಸಂಬಂಧವೇ ಆಗಿದೆಯೆಂದು-ಎಷ್ಟು ಪರಿಯಲ್ಲಿ ವರ್ಣಿಸಿದರೂ ಬಸವಣ್ಣನವರಿಗೆ ತೃಪ್ತಿಯಿಲ್ಲ. ಈ ಪರಿಪರಿಯಾದ ವರ್ಣನೆಯಲ್ಲಿ-ಶಿವತತ್ವಕ್ಕೆ ತಾವು ಚಿರಕಾಲದಿಂದಲೂ ಬದ್ಧವಾಗಿರುವೆನೆಂಬ, ಮುಂದೆಯೂ ಆ ಶಿವಕ್ಕಾಗಿಯೇ ತಮ್ಮ ತನುಮನಧನವನ್ನು ಮೀಸಲಿಡುವೆನೆಂಬ ಸಂಕಲ್ಪ ಅವರದು. ವಿ: ಶರಣಧರ್ಮದಲ್ಲಿ ಜನ್ಮಾಂತರಕಲ್ಪನೆ ಇದ್ದೇ ಇದೆ. ಆದರೆ ಒಮ್ಮೆ ಲಿಂಗೋಪಾಸನೆಯನ್ನು ಕೈಕೊಂಡು ಜಂಗಮ ಜಗತ್ತೆಲ್ಲವೂ ಶಿವಸ್ವರೂಪೆಂದು ದಾಸೋಹವನ್ನು ಆಚರಿಸಿದ್ದೇ ಆದರೆ-ಆ ಜೀವಕ್ಕೆ ಆ ಜನ್ಮವೊಂದರಲ್ಲೇ ಸಕಲಕರ್ಮಗಳೂ ಕ್ಷಯವಾಗಿ ಜೀವನ್ಮುಕ್ತಿ ದೊರೆಯುವುದೆಂಬ ಶ್ರದ್ಧೆ ಶರಣರದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-677 

  Thu 06 Mar 2025  

 🙏
  Santosh
Mudigere