•  
  •  
  •  
  •  
Index   ವಚನ - 5    Search  
 
ಪಿಂಡಜ್ಞಾನಸ್ಥಲ - ಪುನರ್ಜನ್ಮ
ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ, ಅದೇನು ಕಾರಣ ತಂದೆಯೆಂದರಿದೆನಯ್ಯಾ, ಎನ್ನ ಕಾರಣ ತಂದೆಯೆಂದರಿದೆನಯ್ಯಾ, ಅರಿದರಿದು, ನಿಮ್ಮ ಶರಣನು ಆಚರಿಸುವ ಆಚರಣೆಯ ಕಂಡು ಕಣ್ದೆರೆದೆನಯ್ಯಾ, ಕೂಡಲ ಸಂಗಮದೇವಾ.
Transliteration Ayyā nīnu nirākāravāgirdalli nānu jñānavemba vāhanavāgirde kāṇā. Ayyā, nīnu nāṭyakke nindalli nānu caitan'yavemba vāhanavāgirde kāṇā. Ayyā, nīnu ākāravāgirdalli nānu vr̥ṣabhanemba vāhanavāgirde kāṇā, ayyā nīnenna bhavava kondehenendu jaṅgamalān̄chanavāgi bandaḍe nānu bhaktanemba vāhanavāgirde kāṇā kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 O Lord, because you brought Your Śaraṇa to this world, I have been blest Remembering him without a pause, And so I am saved! What is the cause you brought him here? I know the cause: for mine own sake, I've grown in knowledge, and have seen Your Śaraṇa doing all That needs be done.... And now my eyes Are opened, Kūḍala Saṅgama Lord! Translated by: L M A Menezes, S M Angadi
Hindi Translation प्रभो, तुम अपने शरण को मर्त्य में लाये, मैं सदा नामस्मरण करता सुख से जीता रहा । मैं जान गया, क्यों लाये, मैं जान गया, मेरे लिए ही लाये, यह जानकर, तव शरण का आचरण देख, मैंने अपनी आँखें खोलीं कूडलसंगमदेव ॥ Translated by: Banakara K Gowdappa
Telugu Translation అయ్యా: నీ శరణుని మర్త్యలోకమునకు పంపుట తెలిసి తెలిసి నే బ్రతికెదనయ్యా, ఏటికి పంపితివో ఎఱిగితినయ్యా నా జన్మ కారణుడవని తెలిసితినయ్యా, తెలిసి తెలిసి నీ శరణుడాచరించు ఆచరణ తెలిసి కన్ను విప్పి తినయ్యా! కూడల సంగయ్యా! నీ శరణుని మర్త్యలోకమునకు Translated by: Dr. Badala Ramaiah
Tamil Translation ஐயனே, உம் தொண்டனை இவ்வுலகிற்குத் தருவித்தாய், அதனை எண்ணியுவந்து நான் வாழ்ந்தேன் ஐயனே. எதனால் வருவித்தீரென அறிந்தேன் ஐயனே, எதன் பொருட்டு வருவித்தீரென அறிந்தேன் ஐயனே, அறிந்தறிந்து, உம் தொண்டன் ஒழுகு மொழுகலாற்றைக் கண்டு, கண் திறந்தேன் ஐயனே, கூடலசங்கமதேவனே. Translated by: Smt. Kalyani Venkataraman, Chennai
Marathi Translation देवा, तुमच्या शरणांना मर्त्यलोकी आणल्यामुळे स्मरणाने सुखी होऊन मी जगतो. तो जन्म का झाला कळले देवा. मांझ्यासाठी तो जन्म झाला म्हणून कळले देवा. तुमचे शरण समजून आचरण करीत असलेले पाहून माझे डोळे उघडले कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಮರ್ತ್ಯ = ಭೂಲೋಕ;
ಕನ್ನಡ ವ್ಯಾಖ್ಯಾನ ಶಿಲಾದ ಮೊದಲಾಗಿ ವೃಷಭನೆ ಕೊನೆಯಾದ ಬಸವಣ್ಣನವರ ಹಿಂದಿನ ಆರು ಜನ್ಮಗಳೂ ದಿವ್ಯವಾದುವಾಗಿದ್ದು-ಅಲ್ಲಿ ಅವರು ಶಿವನಿಗೆ ಮುಖಾಮುಖಿಯಾಗಿದ್ದುದರಿಂದ-ಆ ಪ್ರಭಾವದಿಂದ ಶಿವನ ಸೇವೆಯಲ್ಲಿ ತೊಡಗಿರುವುದು ಅವರಿಗೆ ನಿರಂತರ ಸಹಜವಾಗಿಯೇ ಇತ್ತು. ಆದರೆ ಅವರ ಏಳನೆಯದಾದ ಬಸವಜನ್ಮವು ಮರ್ತ್ಯಜನ್ಮವಾದುದರಿಂದ-ಈ ಮರ್ತ್ಯಕ್ಕೆ ಸಹಜವಾದ ದಂದುಗದ ಕಾರಣ-ಶಿವನಿಗೂ ತಮಗೂ ಇರುವ ಸ್ವಾಮಿಭೃತ್ಯ ಸಂಬಂಧವನ್ನು ರೂಢಿಸಿಕೊಳ್ಳುವುದು ಅಷ್ಟು ಸುಲಭವಾಗಲಿಲ್ಲ. ಅಂಥ ವಿಷಮ ಪರಿಸ್ಥಿತಿಯಲ್ಲಿ ಆ ಶಿವನೇ ಶರಣರ ರೂಪಿನಲ್ಲಿ ಈ ಮರ್ತ್ಯಕ್ಕೆ ಬಂದು ತನಗೆ ದಾರಿದೀಪವಾಗಿರುವರೆಂಬುದನ್ನು ತಮ್ಮ ಪೂರ್ವಜನ್ಮಗಳ ಶಿವಸೇನೆಯ ಫಲವಾಗಿ ಬಸವಣ್ಣನವರು ಕಂಡುಕೊಂಡರು. ಯಾವ ಜೀವವಾಗಲಿ ತನ್ನನ್ನು ಅವರಿಸಿರುವ ಈ ಮರ್ತ್ಯದ ಕಾವಳದಿಂದ ಕಂಗೆಡಬೇಕಾಗಿಲ್ಲ-ಅಲ್ಲಿ ಅದನ್ನು ಉದ್ಧರಿಸಲು ಸಾಕ್ಷಾತ್ ಶಿವಸ್ವರೂಪಿಗಳಾದ ಶರಣರಿದ್ದಾರೆ-ಅವರ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ನಡೆದರೆ ದಾರಿತಪ್ಪುವುದಿಲ್ಲ. ಈ ನಿರ್ಣಯಕ್ಕೆ ಬಂದ ಬಸವಣ್ಣನವರು ಅಸಮಾನ ಜ್ಞಾನಧೀರರಾಗಿ-ಮಾನವನಲ್ಲಿ ಮಹಾದೇವನನ್ನು ಉಪಾಸಿಸಿದರು. ಜೀವರನ್ನು ಈ ಮರ್ತ್ಯಕ್ಕೆ ತಂದುದರಿಂದ ಶಿವನು ಜೀವರಿಗೆ ತಂದೆಯೆಂಬುದು ನಿಜವಾದರೂ ಅವರನ್ನು ಈ ಮರ್ತ್ಯದಲ್ಲಿ ಪ್ರಜ್ಞಾವಂತರನ್ನಾಗಿ ಪರಿವರ್ತಿಸಿದ ಶಿವಶರಣರೇ ಜೀವರಿಗೆ ನಿಜವಾದ ತಂದೆಯಂತಾಗುವರು. ಅವರಿಗೆ ಶಿವಾಚರಣೆಯನ್ನೂ ಶಿವಜ್ಞಾನವನ್ನೂ ಕಲಿಸಲು ಶಿವನೇ ತನ್ನ ಪ್ರತಿನಿಧಿಯನ್ನಾಗಿ ಶರಣರನ್ನು ಕಳಿಸಿರುವನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-729 

  Sat 15 Mar 2025  

 https://news.taralabalu.in/news.php?tp=2846

  Dhanush hv
Dhanush

C-347 

  Sat 19 Aug 2023  

 ಚೆನ್ನಾಗಿ ಇದೆ ಬಸವ ಧರ್ಮ ಜೆಗತಿಗೆ ಒಂದು ಪ್ರಸಿದ್ದ ಧರ್ಮ ಗುರು ಬಸವಣ್ಣನವರನ್ ನೇನೆಸಿ ಕೊಂಡರೆ ಸಾಕು ಯಾವ ಕಷ್ಟ ಬರುವದಿಲ್ಲ ಎಂದು ಹೇಳಿ ನನ್ನ್ ಮನಸ್ಸು ಹೇಳುತ್ತೆ
  Mahesh Patil