Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Singer: Vageesh Bhat, Music Director: Vidushi Shyamala G Bhave. ℗ Lahari Recording Company Released on:1-8- 2014
Art
English TranslationStrong is the elephant, but can you say:
Weak is the goad of Mahout? No Sir,
Strong is the mountain, but can you say:
Weak is the thunderbolt of Indra
Who hit them to fall down to the Earth? No Sir,
Strong is the Darkness, but can you say:
Weak is the Light? No Sir,
Strong is the ignorance, but can you say:
Weak is the mind meditating on You?
Not at all, O Lord Kūḍala Saṅgama!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2Strong is the elephant: but could you say
Less strong the goad ?
Nay, nay, not so!
Strong is the mountain: but could you say
The thunderbolt less strong?
Nay, nay, not so!
Strong is the darkness: but could you say
Less strong the light ?
Nay, nay, not so!
Oblivion's strong: but could you say
The heart that loves Thee less strong ?
Nay, nay, not so,
O Kūḍala Saṅgama!
Translated by: L M A Menezes, S M Angadi
Russian TranslationСлон могуч, но можно ли сказать, что анкуша слаба? Нет.
Гора сильна, но можно ли сказать, что Ваджра немощна? Нет.
Тьма глубока, но можно ли сказать, что огонек мал? Нет.
Забвение велико, но можно ли сказать, что память одного бессильна? Нет.
О, Бог Кудаласангама.Translated by: Prof Harishankar, Mysore and Mrs. Galina Kopeliovich, Russia
Hindi Translationकरी बडा है, अंकुश को छोटा कह सकते हैं? नहीं,
गिरि बडा है, वज्र को छोटा कह सकते हैं? नहीं,
तिमिर गहन है दीप ज्योति को छोटा कह सकते हैं? नहीं
विस्मृति गहन है, तव नाम-जापक मन को छोटा कह सकते हैं?
नहीं कूडलसंगमदेव ॥
Translated by: Banakara K Gowdappa
Telugu Translationకరి ఘన మంకుశ మల్పమన తగునే? తగదయ్యా,
గిరి ఘనము వజ్రమల్పమనదగునే? తగదయ్యా,
తమసమధికము జ్యోతి అల్పమనతగునే? తగదయ్యా,
మఱుపు ఘనము నిన్ను స్మరించుమతి అల్పమన తగునే?
తగదు తగదయ్యా కూడల సంగమదేవా!
Translated by: Dr. Badala Ramaiah
Marathi Translationजरी हत्ती महान, अंकुश नोहे लहान
महानासी लहान, म्हणू कैसे?
जरी पर्वत महान, वज्र नोहे लहान
त्याचे मोठेपण, कळो येई
अंधकार महान, ज्योती नोहे लहान
प्रकाश प्रमाण, हाचि एक
विस्मृती ती महान, मन नोहे लहान
स्मरणयुक्त मन, सान कैसे?
कूडलसंगमदेवा ! स्मरण मन महान
कैसे म्हणू लहान, सर्वश्रेष्ठ
अर्थ - जरी हत्ती बलाढ्य असला म्हणून अंकुशाला लहान म्हणता येणार नाही. अंकुशात महानास आकळण्याची शक्ती असते. जरी पर्वत मोठा असला म्हणून काय झाले! वज्रात त्या महान पर्वताचे राई एवढे तुकडे करण्याचे सामर्थ्य असते. काळ्याकुट्ट काळोखात देखील एक लहानशी ज्योत क्षणार्धात त्यातील अंधःकार नाहीसा करु शकते. त्याचप्रमाणे जन्मांतराच्या फेर्यामुळे स्मरण पुसले गेले तरी मन लहान समजले जाणार नाही. कारण त्याच लहान मनाला महान परमेश्वरुपी अनुभूती करून घेण्याची सामर्थ्यशक्ती व पात्रता त्यात असते. म्हणून मनाच्या चिंतनाने अनंत जन्माचे अज्ञान नष्ट करून घेता येते. इत्यर्थ असा की हत्ती, पर्वत, काळोख व विस्मरण ह्या मोठ्या शक्ती असल्या तरी अंकुश, वज्र, ज्योति व मन हे सामान्य वाटत असले तरी ते त्या ठिकाणी आपापली श्रेष्ठता पटवून देतात. परमेश्वराचे सर्वत्र स्मरण करणारे व सदैव जाणीव करुन देणारे व अज्ञान नष्ट करणार्या मनास लहान कसे म्हणता येईल ?Translated by Rajendra Jirobe, Published by V B Patil, Hirabaug, Chembur, Mumbai, 1983
हत्ती मोठा, आणि अंकुश लहान म्हणता येईल?
येणार नाही.
पर्वत मोठा, आणि वज्र लहान म्हणता येईल?
येणार नाही.
अंधकार मोठा, आणि ज्योत लहान म्हणता येईल?
येणार नाही.
विस्मरण मोठे, आणि तुमचे स्मरण लहान म्हणता येईल ?
येणार नाही
कूडलसंगमदेवा.
Translated by Shalini Sreeshaila Doddamani
Urdu Translationیہ کہے کوئی کہ آنکس خورد ہے ہاتھی بڑا
ہم کہیں گے جی نہیں،ایسا تو ہوسکتا نہیں
یہ کہےکوئی کہ ہے کہسارسے الماس خورد
ہم کہیں گےجی نہیں،ا یسا توہوسکتا نہیں
یہ کہےکوئی کہ شب کی تیرگی کےسامنے
جگمگاتی شمع کی لو درحقیقت کچھ نہیں
ہم کہیں گےجی نہیں،ایساتوہوسکتا نہیں
یہ کہےکوئی فراموشی ہےعظمت کی د لیل
ہم کہیں گےکوڈلا سنگا وہ دل تو ہے بڑا
جس میں تیری یاد کی شمعیں سدا روشن رہیں
Translated by: Hameed Almas
ಕನ್ನಡ ವ್ಯಾಖ್ಯಾನದೇವರ ನೆನಹು ಮುಖ್ಯ
ಈ ವಚನದಲ್ಲಿ ಬಸವಣ್ಣನವರು ದೇವರನ್ನು ನೆನೆವ ಮನದ ಹಿರಿಮೆಯನ್ನು ತೋರಿಸಿದ್ದಾರೆ. ಅದಕ್ಕಾಗಿ ಅವರು ಮೂರು ನಿದರ್ಶನಗಳನ್ನು ಬಳಸಿಕೊಂಡಿದ್ದಾರೆ.
1. ಬೆಟ್ಟದಂತಿರುವ ಆನೆಯೆತ್ತ, ಪುಟ್ಟದಾದ ಅಂಕುಶವೆತ್ತ! ಆನೆಯ ಎದುರಿಗೆ ಅಂಕುಶ ಒಂದು ತೃಣಮಾತ್ರ ಎಂದು ಭಾವಿಸಿ ಅಂಕುಶ ಕಿರಿದು, ಚಿಕ್ಕದು, ಕ್ಷುಲಕ ಎನ್ನಲು ಸಾಧ್ಯವೇ? ಸಾಧ್ಯವಿಲ್ಲ, ಏಕೆ? ಆನೆ ಎಷ್ಟೇ ದೊಡ್ಡದಿರಬಹುದು, ಭೋರ್ಗರೆವ ಪ್ರವಾಹದಂತೆ ಎದುರಿಲ್ಲದೆ ಮುನ್ನುಗ್ಗಬಹುದು. ಆದರೆ ಅಂತಹ ಶಕ್ತಿಶಾಲಿ ಆನೆಯೂ ಮಾವಟಿಗನ ಕೈಯಲ್ಲಿರುವ ಚಿಕ್ಕ ಅಂಕುಶದ ಮುಂದೆ ತಲೆಬಾಗಿ ನಿಲ್ಲುವುದು ಅದರ ಮೂಲಕ ದೊರೆವ ಸಂಜ್ಞೆಗನುಗುಣವಾಗಿ ನಡೆಯುವುದು. ಅಂಕುಶದ ಆಜ್ಞಾನುಸಾರಿಯಾಗುವುದು. ಹೀಗಿರುವಾಗ ಆನೆ ದೊಡ್ಡದು, ಅಂಕುಶ ಚಿಕ್ಕದು ಎಂದು ಹೇಳುವುದು ಸರಿಯೇ? ಆಕಾರದಲ್ಲಿ ಒಂದು ದೊಡ್ಡದು ಬೇರೊಂದು ಚಿಕ್ಕದು ಆಗಿರಬಹುದು. ಆದರೆ ಮೇಲೆ ತಿಳಿಸಿರುವ ದೃಷ್ಟಿಯಿಂದ ಅಂಕುಶ ಆನೆಗಿಂತಲೂ ಹಿರಿದು; ಕಿರಿದೆನ್ನಲು ಸಾಧ್ಯವೇ ಇಲ್ಲ.
2. ಪರ್ವತವಾದರೋ ಬಹು ದೊಡ್ಡದು. ಆದರೆ ವಜ್ರ ಅದರ ಮುಂದೆ ಏತರದು ಎಂದು ಹೇಳಲು ಸಾಧ್ಯವೇ? ಇಲ್ಲಿ ಒಂದು ಪೌರಾಣಿಕ ಕಥೆ ಇದೆ. ಒಂದು ಕಾಲದಲ್ಲಿ ಪರ್ವತಗಳಿಗೆಲ್ಲಾ ರೆಕ್ಕೆಗಳಿದ್ದು ಅವು ಆಕಾಶದಲ್ಲಿ ಅತ್ತಿಂದಿತ್ತ ಹಾರಾಡುತ್ತಿದ್ದವು. ಇದರಿಂದ ದೇವತೆಗಳ ಸಂಚಾರಕ್ಕೆ ಆತಂಕವಾಗಿತ್ತು. ಆಗ ದೇವತೆಗಳ ಒಡೆಯನಾದ ಇಂದ್ರನು ತನ್ನ ವಜ್ರಾಯುಧದಿಂದ ಅವುಗಳ ರೆಕ್ಕೆಗಳನ್ನು ಕತ್ತರಿಸಿ ಹಾಕಿದನು. ರೆಕ್ಕೆಗಳನ್ನು ಕಳೆದುಕೊಂಡ ಪರ್ವತಗಳು ಹಾರಾಡಲಾಗದೇ ನಿಂತಲ್ಲಿಯೇ ನಿಂತು 'ಅಚಲ' (ಚಲಿಸದೇ ಇರುವುದು) ಎಂಬ ಹೆಸರನ್ನು ಪಡೆದವು. ಆದ್ದರಿಂದ ಪರ್ವತಗಳ ಸೊಕ್ಕನ್ನಡಗಿಸಿದ ವಜ್ರ ಹಿರಿದಾದುದಾಯಿತು.
3. ಮೇಲೆ ಹೇಳಿದಂತೆಯೇ ಕತ್ತಲು ಎತ್ತ ನೋಡಿದೊಡತ್ತ ಹಬ್ಬಿರಬಹುದು. ಹೀಗೆಂದು ತಿಳಿದು ಒಂದು ಮಿನುಗುವ ದೀಪದ ಬೆಳಕನ್ನು ಏನು ಮಹಾ ಎಂದು ಕಡೆಗಣಿಸಬಹುದೇ? ಇಲ್ಲ ಆ ಬೆಳಕಿನ ಮುಂದೆ ಎಂತಹ ಗಾಢಾಂಧಕಾರವೂ ಓಡಿಹೋಗುವುದು.
ಅದೇ ರೀತಿ ಮರವೆ ದೊಡ್ಡದಿರಬಹುದು. ಆದರೆ ದೇವರನ್ನು ಸದಾ ನೆನೆಯುವ ಮನಸ್ಸು ಮಾತ್ರ ಕಿರಿದು ಎನ್ನಲಾಗುವುದು. ಅಂಕುಶವು ಹೇಗೆ ಆನೆಯನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದೋ, ವಜ್ರಾಯುಧವು ಹೇಗೆ ಪರ್ವತಗಳ ಸೊಕ್ಕನ್ನಡಗಿಸುವುದೋ, ಬೆಳಕು ಕತ್ತಲನ್ನು ಹೇಗೆ ನಿವಾರಿಸುವುದೋ ಅದೇ ರೀತಿ ದೇವರ ಧ್ಯಾನದಲ್ಲಿ ಮಗ್ನವಾದ ಮನಸ್ಸೂ ಮರವೆಯನ್ನು ತೊಡೆದು ಹಾಕುವುದು. ಇಲ್ಲಿ 'ಮರಹು' ಎಂದರೆ ದೇವರನ್ನು ಮರೆತಿರುವ - ಅಂತೆಯೇ ದೇವರಿಂದ ದೂರವಾದ ಚಂಚಲತೆ, ವಿಕಾರಗಳಿಂದ ಕೂಡಿದ ಅಜ್ಞ ಮನಸ್ಸು, ಆದ್ದರಿಂದ ಮನಸ್ಸು ದೇವರ ನೆನಹಿನಲ್ಲಿ ಮಗ್ನವಾದರೆ ದೇವರ ಸಾಮೀಪ್ಯಕ್ಕೆ ಬಂದು, ಏಕಾಗ್ರತೆಯನ್ನು ಹೊಂದಿ ಚಂಚಲತೆ, ವಿಕಾರಗಳಿಗೆ ಅವಕಾಶ ದೊರೆಯದು.
ಅಣ್ಣನವರ ಈ ವಚನವು, ವಿಷ್ಣುಶರ್ಮನಿಂದ ಸಂಕಲಿತವಾದ ಪಂಚತಂತ್ರವೆಂಬ ಪ್ರಖ್ಯಾತ ಸಂಸ್ಕೃತ ಗ್ರಂಥದಲ್ಲಿಯ ಮಿತ್ರ ಭೇದವೆಂಬ ಪ್ರಥಮ ತಂತ್ರದಲ್ಲಿರುವ ಈ ಮುಂದಿನ ಶ್ಲೋಕವನ್ನು ಬಹಳವಾಗಿ ಹೋಲುತ್ತದೆ.
“ಹಸ್ತೀಸ್ಥೂಲತರಃಸ ಚಾಂಕುಶವಶಃ, ಕಿಂ ಹಸ್ತಿ ಮಾತ್ರೋಂ ಕುಶೊ? ದೀಪೇ ಪ್ರಜ್ವಲಿತೇ ಪ್ರಣಶ್ಯತಿ ತಮಃ, ಕಿಂ ದೀಪ ಮಾತ್ರಂ ತಮಃ? ವಜ್ರೇಣಾಪಿ ಹತಾಃ ಪತಂತಿ ಗಿರಯಃ ಕಿಂ ವಜ್ರಮಾತ್ರೋ ಗಿರಿಸ್ತೇಜೋಯಸ್ಯ ವಿರಾಜತೇ ಬಲವಾನ್, ಸ್ಥೂಲೇಷು ಕಃ ಪ್ರತ್ಯಯಃ?” “ದೊಡ್ಡದಾದ ಆನೆಯೂ ಕೂಡ ಅಂಕುಶಕ್ಕೆ ವಶವಾಗುತ್ತದೆ. ಆದರೆ ಅಂಕುಶವೇನು ಆನೆಯಷ್ಟು ದೊಡ್ಡದೇ? ದೀಪವು ಬೆಳಗುತ್ತಲೆ ಕಗ್ಗತ್ತಲೆಯು ಕಣ್ಮರೆಯಾಗುತ್ತದೆ. ಆದರೆ ಕತ್ತಲೆಯೇನಾದರೂ ದೀಪದಷ್ಟೇ ಇರುತ್ತದೆಯೇ? ವಜ್ರಾಯುಧದಿಂದ ಹತಗೊಂಡ ಪರ್ವತಗಳೂ ಉರುಳಿ ಬೀಳುತ್ತವೆ. ಆದರೆ ಆ ಪರ್ವತಗಳೇನಾದರೂ ವಜ್ರಾಯುಧದಷ್ಟೇ ಇರುತ್ತವೆಯೇ. ಆದ್ದರಿಂದ ಯಾವನು ತೇಜಸ್ಸಿಯೋ ಅವನೇ ನಿಜವಾದ ಬಲಶಾಲಿಯು, ಬರೀ ದೊಡ್ಡ ಆಕಾರದಲ್ಲೇನಿದೆ”?? ಹೀಗೆ ಈ ಶ್ಲೋಕದಲ್ಲಿರುವ ಮೂರು ಉಪಮೆಗಳು ಅದೇ ಭಾವ ಮತ್ತು ಅದೇ ಧಾಟಿಯಲ್ಲಿ ಅಣ್ಣನವರ ವಚನದಲ್ಲಿ ಕಂಡುಬಂದಿದ್ದರೂ ಅವುಗಳ ಮೂಲಕ ಪ್ರತಿಪಾದಿಸುವ ವಿಚಾರ ಎರಡರಲ್ಲೂ ಬೇರೆ ಬೇರೆ, ಸಂಸ್ಕೃತ ಶ್ಲೋಕವು ಒಬ್ಬ ತೇಜಸ್ವಿ ವೀರನ ಶರೀರ ಸಾಮರ್ಥ್ಯವನ್ನು ವರ್ಣಿಸಿದರೆ, ಅಣ್ಣನ ವಚನವು ಸದಾ ದೇವರ ನೆನಹಿನಲ್ಲಿ ನಿರತನಾದ ಬ್ರಹ್ಮತೇಜಸ್ವಿಯ ಚಿತ್ತ ಸ್ಥೈರ್ಯವನ್ನು ಬಣ್ಣಿಸುತ್ತದೆ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
C-730 
  Sat 15 Mar 2025  
ಉತ್ತಮವಾಗಿದೆ   Sunil k b
B kalapanahalli
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.