•  
  •  
  •  
  •  
Index   ವಚನ - 9    Search  
 
ಸಂಸಾರಹೇಯಸ್ಥಲ - ಸಂಸಾರ
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ! ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು; ಇನ್ನೆಂದಿಗೆ ಮೋಕ್ಷವಹುದೊ, ಕೂಡಲ ಸಂಗಮದೇವಾ?
Transliteration Candramanante kaḷe samanisittenage sansāravemba rāhu sarvagrāsiyāgi nuṅgittayyā! Indenna dēhakke grahaṇavāyittu; innendige mōkṣavahudo, kūḍala saṅgamadēvā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation I was growing like a moon Brighter and brighter every night! But Rāhu, the worldly life, Has swallowed me whole! Alas! Alas! Today, I am completely eclipsed by worldly life! When will I be liberated? O Lord Kūḍala Saṅgama!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 I added day by day a digit of light like the moon. The python-world, omnivorous Rāhu, devoured me. Today my body is in eclipse. When is the release, O lord of the meeting rivers?

Translated by: A K Ramanujan
Book Name: Speaking Of Siva
Publisher: Penguin Books
----------------------------------
My lot is as the moon's- A shadowy spot. The Rāhu of this world Hath swallowed me whole: today, My body is in a total eclipse! When, then, O Kūḍala Saṅgama, Will deliverance come ?

Translated by: L M A Menezes, S M Angadi
Russian Translation Во мне отражено сияние луны, Но Раху затмил его беспокойной самсарой. Тело мое погружено в затмение, О, Бог Кудаласангама, Когда же придет избавление? Translated by: Prof Harishankar, Mysore and Mrs. Galina Kopeliovich, Russia
Hindi Translation चंद्र सदृश मुझे प्रकाश प्राप्त है, संसार रूपी राहुने सर्व - ग्रासक बन निगला है, आज मेरी देह ग्रहण – ग्रस्त है कब मुझे मोक्ष मिलेगा, कूडलसंगमदेव ॥ Translated by: Banakara K Gowdappa
Telugu Translation చంద్రునివలె నాకు కళ తరుగుచుండెనయ్యా! సంసారమను రాహువు సర్వగ్రాహిjైు మ్రింగెనయ్యా; నా దేహమున కిప్పుడు గ్రహణముప్పటై ముక్తి యిక యెప్పుడో! కూడల సంగమదేవా? Translated by: Dr. Badala Ramaiah
Tamil Translation திங்களனைய களை நிறைந்த என்னை, வாழ்வெனும் இராகு முழுதாய் விழுங்கிய தையனே, இன்று என் உடலிற்குக் கிரகணமாயிற்று, இனி எஞ்ஞான்று வீடுபேறுறுவதோ கூடலசங்கம தேவனே? Translated by: Smt. Kalyani Venkataraman, Chennai
Marathi Translation ​चंद्रकळा घेऊनि, मज जन्म झाले ​​​​​संसारी ग्रासिले, राहू जैसे ​​​खग्रास ग्रहण, देहासि ते धरिले ​​​​​संसार ते ठरले, भवपाश ​​​कूडलसंगमदेवा ! आता केव्हा मोक्ष ​​​​​साक्षी भावे दक्ष राहिन मी अर्थ -​या संसारात जन्म घेत असतांना चंद्रकळा घेऊन आलो होतो. पण येथे येताच संसारातील मोह त्या राहू-केतूप्रमाणे मला ग्रासून टाकले. माझ्या कायेस खग्रास ग्रहण लागल्यासारखे वाटत आहे. म्हणून मोहापासून आता सुटका करुन घेतल्याशिवाय भवपाशातून मुक्त होणे शक्य नाही. याशिवाय मोक्ष मिळणार तरी कसे? हे कूडलसंगम देवा (परमेश्‍वरा) मी संसारात साक्षी भावे राहिल्यास भवपाश, मोह, राहू-केतू, ग्रहण इत्यादी मला काहीही करणार नाहीत. Translated by Rajendra Jirobe, Published by V B Patil, Hirabaug, Chembur, Mumbai, 1983 पूर्ण चंद्राप्रमाणे मी दिसत होतो. संसाररुपी राहूने सर्वग्रासी होऊन गिळले. आज या देहाला ग्रहण लागले. यातून माझी सुटका कधी होणार कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಕಳೆ = ತೇಜಸ್ಸು; ಮೋಕ್ಷ = ಬಿಡುಗಡೆ; ರಾಹು = ದೆವ್ವ, ಭೂತ, ನವಗ್ರಹಗಳಲ್ಲಿ ಒಂದು; ಸರ್ವಗ್ರಾಸಿ = ಎಲ್ಲಾ ತುತ್ತು;
ಕನ್ನಡ ವ್ಯಾಖ್ಯಾನ ಬಸವಣ್ಣನವರು ಹದಿನಾರು ವರ್ಷದ ಯುವಕರಾಗಿ-ತಾವು ಲೋಕಸಂಗ್ರಹಕಾರ್ಯದಲ್ಲಿ ತೊಡಗಬೇಕೆನ್ನುತ್ತಿರುವಷ್ಟರಲ್ಲಿ-ನಮಗೆ ಈಗ ಊಹಿಸಲಾಗದ ಯಾವುದೋ ಪ್ರಕರ್ಷವಿಪರೀತ ಪರಿಸ್ಥಿತಿಯೊಂದು ಅವರಿಗೆ ಇದಿರಾಗಿ ಮುತ್ತಿ ಮಂಕುಗೊಳಿಸಿ ಅವರನ್ನು ತೀರ ನಿಸ್ಸಹಾಯಕರನ್ನಾಗಿ ಮಾಡಿರಬೇಕು. ಇಂಥ ಖೂಳ ರಾಹುಗ್ರಸ್ತ ಕಾಳರಾತ್ರಿಗಳು ಎಲ್ಲ ಸಾಧಕರ ಜೀವನದಲ್ಲೂ ಒಂದಿಲ್ಲೊಂದು ಪ್ರಕಾರದಲ್ಲಿ ಕಾಣಿಸಿಕೊಂಡು ಅವರನ್ನು ಸ್ವಲ್ಪಕಾಲ ಭಾಧೆಗೊಳಪಡಿಸಿರುವುದನ್ನು ಚರಿತ್ರೆಯಲ್ಲಿ ಓದಿದ್ದೇವೆ. ಚಂದ್ರಸೂರ್ಯರಿಗೂ ಗ್ರಹಣ ತಪ್ಪಿದ್ದಲ್ಲ-ಮುಕ್ತರಾದ ಅವರು ಮರಳಿ ದೇದೀಪ್ಯಮಾನವಾಗಿ ಪ್ರಕಾಶಿಸುವರೆಂದು ಪ್ರಕೃತಿ ನಮಗೆ ಸಾರಿ ಸಾರಿ ಹೇಳುತ್ತಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು