•  
  •  
  •  
  •  
Index   ವಚನ - 11    Search  
 
ಸಂಸಾರಹೇಯಸ್ಥಲ - ಸಂಸಾರ
ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆ ಎನಗಾಯಿತ್ತಯ್ಯಾ! ಅಕಟಕಟಾ! ಸಂಸಾರ ವೃಥಾ ಹೋಯಿತ್ತಲ್ಲಾ! ಕರ್ತುವೇ ಕೂಡಲ ಸಂಗಮದೇವಾ, ಇವ ತಪ್ಪಿಸಿ ಎನ್ನುವ ರಕ್ಷಿಸಯ್ಯಾ.
Transliteration Kappe sarpana neḷalallippante enagāyittayyā! Akaṭakaṭā! Sansāra vr̥thā hōyittallā! Kartuvē kūḍala saṅgadēvā, iva tappisi ennuva rakṣisayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Art
English Translation 2 My plight is like a frog's In the shadow of a snake... Alas! my life unprofitably flows! O Lord that madest me, Brush it from me and save me, Kūḍala Saṅgama! Translated by: L M A Menezes, S M Angadi
Hindi Translation सर्पछाया में बसे- दादुर की सी दशा है मेरी । हाय, संसार व्यर्थ बीत गया! कर्ता कूडलसंगमदेव । इससे मुक्त कर रक्षा करो मेरी ॥ Translated by: Banakara K Gowdappa
Telugu Translation పామునీడ నున్న కప్పగతి యయ్యె నా బ్రతుకు; కటకటా! సంసారము వ్యర్థమైపోయెనే! అయ్యా కూడల సంగయ్యా దీనిని తప్పించి నను రక్షింపుమయ్యా! Translated by: Dr. Badala Ramaiah
Tamil Translation தவளை பாம்பினிழலி லிருப்பதனைய எனக் காயிற்றையனே, அடடா, வாழ்க்கைப் பயனில தாயிற் றன்றோ, உடையனே, கூடல சங்கம தேவனே, இதனைக் களைந் தெனைப் பேணு மையனே. Translated by: Smt. Kalyani Venkataraman, Chennai
Marathi Translation सापाच्या छायेतील, बेडकापरी देख ​​​​​झालो हो गत, तैशी माझी ​​​अरे संसारी, गुरफटुनि त्यात ​​​​​वाया गेली हयात, कंसा देख ​​​मन रक्षणाची, चिंता रे तुजला ​​​​​वाचव मजला, तयातून ​​​कूडरूसंगमदेवा ! जाणतो एकच ​​​​​‘कृती’ म्हणजेच, तुज प्राप्ती अर्थ - सापाच्यासावलीतीलबेडकाप्रमाणेमृत्यूच्याछायेतभयभीतहोऊनजगतोआहे. यासंसारातपूर्णगुरफटूनगेल्यामुळेयात्याअर्थानेंवस्वार्थानेजीवनजगतआहे. म्हणूनमलायातूनवाचवा. देवा! तूचकर्तावकरवीताअसल्याकारणानेमाझ्यासंरक्षणाचीजबाबदारीतुझ्यावरआहे. मीयेथेसदाकार्यरतराहूइच्छितो. म्हणूनचसंसाराचीचिंतानकरतावभयभीतनहोता. सदैवसतर्कराहूनसत्कर्मकरीतराहीन. कारणकृतीम्हणजेचपरमेश्वरप्राप्तीहोय. Translated by Rajendra Jirobe, Published by V B Patil, Hirabaug, Chembur, Mumbai, 1983 बेडूक सापाच्या सावलीत राहिल्याप्रमाणे माझी स्थिती झाली अरेरे देवा ! संसार व्यर्थ झाला. कर्ता-करविता कूडलसंगमदेवा, यातून माझे तुम्हीच रक्षण करा. Translated by Shalini Sreeshaila Doddamani
ಶಬ್ದಾರ್ಥಗಳು ಕರ್ತು = ಮೂಲ; ನೆಳಲ = ನೆರಳು; ವೃಥಾ = ಸುಮ್ಮನೆ;
ಕನ್ನಡ ವ್ಯಾಖ್ಯಾನ ಚೆಂಬಿಸಿಲೋ ಬೆಳುದಿಂಗಳೋ ಚೆಲ್ಲಿತೆಂದು-ತನ್ನ ಇಕ್ಕಟ್ಟಿನಿಂದ ಹೊರಹೊರಟ ಕಪ್ಪೆಯನ್ನು ಸರ್ಪ ಹೆಡೆಬಿಚ್ಚಿ ಹಿಂಬಾಲಿಸಿ ಬಂದರೆ, ತಾನೆಷ್ಟು ಕುಪ್ಪಳಿಸಿದರೂ ಅದರ ಹೆಡೆಯ ನೆರಳು ತನ್ನ ಮೇಲೆ ಬಿದ್ದಿರುವಷ್ಟು ಆ ಸರ್ಪ ತನಗೆ ಹತ್ತಿರವಾದರೆ, ಈಗಲೋ ಇನ್ನೊಂದು ಘಳಿಗೆಗೋ ಸಾವೆನ್ನುವಂಥ ಸಂಕಟವಾದರೆ-ಆ ಕಪ್ಪೆಯ ಸ್ಥಿತಿ ಅದೆಷ್ಟು ಭೀಕರ! ಬ್ರಾಹ್ಮಣ್ಯವನ್ನು ತಿರಸ್ಕರಿಸಿ ಕೂಡಲಸಂಗಮದ ಕಡೆಗೆ ಹೊರಟಾಗ-ಸಂಪ್ರದಾಯಸ್ಥರ ದಾಳಿ ಬಸವಣ್ಣನವರ ಮೇಲೆ ನಡೆದಿರಬೇಕು (ನೋಡಿ ಸಿಂಗಿರಾಜಪುರಾಣ 5=93-98). ಆ ಬೆನ್ನಟ್ಟುವಂಥ ಭೀಕರ ಪ್ರಸಂಗದಲ್ಲಿ ಬಸವಣ್ಣನವರಿಟ್ಟ ಹುಯ್ಯಲಿದು. ಅಥವಾ ಬಸವಣ್ಣನವರು ತಮ್ಮ ದಿವ್ಯಜೀವನದ ಅಳಿವು ಉಳಿವಿನ ಸಂಗ್ರಾಮದ ಯಾವುದೋ ಒಂದು ದುರ್ಭರ ಸಂದರ್ಭದಲ್ಲಿ ದೇವರಿಗಿಟ್ಟ ಮೊರೆ ಈ ವಚನ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-349 

  Sat 19 Aug 2023  

 ಮರಾಠಿಯಲ್ಲಿ ಭಾಷಾಂತರ ಹೇಗೆ ಮಾಡಬೇಕು? ತಿಳಿಸಿ.
  ಕಾಶಿನಾಥ ಚಿದ್ರಿಕರ ನಾಂದೇಡ್ ಮಹಾರಾಷ್ಟ್ರ