•  
  •  
  •  
  •  
Index   ವಚನ - 12    Search  
 
ಸಂಸಾರಹೇಯಸ್ಥಲ - ಸಂಸಾರ
ಶೂಲದ ಮೇಲಣ ವಿಭೋಗವೇನಾದೊಡೇನೊ? ನಾನಾವರ್ಣದ ಸಂಸಾರ ಹಾವ ಹಾವಾಡಿಗನ ಸ್ನೇಹದಂತೆ! ತನ್ನಾತ್ಮ ತನಗೆ ಹಗೆಯಾದ ಬಳಿಕ ಬಿನ್ನಾಣವುಂಟೆ, ಮಹಾದಾನಿ ಕೂಡಲ ಸಂಗಮದೇವಾ?
Transliteration Śūlada mēlaṇa vibhōgavēnādoḍēno? Nānāvarṇada sansāra hāva hāvāḍigana snēhadante! Tannātma tanage hageyāda baḷika binnāṇavuṇṭe, mahādāni kūḍala saṅgamadēvā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Upon the gallows standing, what good to me Your daintiest repast ? This many-coloured world is like The amity between A snake-charmer and a snake... Once self is enemy to self, What chance of an accord, O most bountiful Lord Kūḍala Saṅgama ? Translated by: L M A Menezes, S M Angadi
Hindi Translation शूल पर का भोग कैसा भी क्यों न हो? नाना वर्ण का संसार साँप – संपेरे के स्नेह सा है। जब आत्मा स्वशत्रु बन जाय, तब ज्ञान कैसे हो, महादानी कूडलसंगमदेव? Translated by: Banakara K Gowdappa
Telugu Translation శూలము పై గల భోగము లేమైననేమి? వన్నెవన్నెల సంసారము పాము పాములవాని స్నేహమువలె తనయాత్మ తనకే పగjైున వెనుక; ఇక విన్నాణమున్నదే కూడల సంగమదేవా! Translated by: Dr. Badala Ramaiah
Tamil Translation சூலத்தின் மேலே நுகர்ச்சி என்னாயினென்ன? பல்லுருகொண்ட வாழ்வு, பாம்பு -- பாம்பாட்டி நட்பு போலாம்! தன் ஆன்மா தனக்குப் பகையாயின் ஒட்பமாமோ, வள்ளலே, கூடல சங்கம தேவனே. Translated by: Smt. Kalyani Venkataraman, Chennai
Marathi Translation सुळावरील सुखोपभोग हा कसला भोग आहे? अनेक रंगाचा संसार सापाच्या गारुड्याच्या स्नेहासम ! आपला आत्मा आपलाच शत्रू झाला तर कोण वाचविणार महादानी कूडलसंगमदेवा? Translated by Shalini Sreeshaila Doddamani
ಶಬ್ದಾರ್ಥಗಳು ಬಿನ್ನಾಣ = ನೈಪುಣ್ಯ; ವಿಭೋಗ = ಸುಖವಿಲ್ಲದ ; ಶೂಲ = ಚೂಪಾದ ಆಯುಧ; ಹಗೆ = ಶತ್ರು;
ಕನ್ನಡ ವ್ಯಾಖ್ಯಾನ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರನೆಂದಷ್ಟೇ ಅಲ್ಲ-ಸ್ಪೃಶ್ಯ ಅಸ್ಪೃಶ್ಯನೆಂಬ, ಧನಿಕ-ಧೀನನೆಂಬ ಶಿಷ್ಟ-ಪಾಮರನೆಂಬ , ಜೀಯ-ಜೀತದಾಳೆಂಬ ಮತ್ತೆಷ್ಟೋ ವರ್ಣಚ್ಛಾಯೆಗಳಿಂದ ಛಿದ್ರ-ವಿಚ್ಛಿದ್ರವಾಗಿರುವ ಈ ಪ್ರಪಂಚಕ್ಕೂ, ಅದರೊಡನೆ ಆಡುತ್ತಿರುವ ಜೀವನಿಗೂ ಇರುವುದು ಹಾವು-ಹಾವಾಡಿಗನ ನಡುವಿರುವ ನಿತ್ಯಗಂಡಾಂತರದ ಸಂಬಂಧ. ಪರಸ್ಪರ ಅವಿಶ್ವಾಸದಿಂದಾಗಿ ಯಾವ ಘಳಿಗೆಗೆ ಏನಾಗುವುದೋ ತಿಳಿಯದು. ಈ ನಿತ್ಯಭೀತ ವಾತಾವರಣ ಸಾಲದೆಂಬಂತೆ-ಶೂಲಕ್ಕೇರುವುದಾದರೂ ಸರಿಯೆ-ಸುಳ್ಳು ವಂಚನೆ ಕಳ್ಳತನ ಮುಂತಾದ ಅವ್ಯವಹಾರಗಳಿಂದ ವೈಭವಜೀವನ ನಡೆಸಬೇಕೆಂದು ನಿರ್ಣಯಿಸಿ, ಆ ರಭಸದಲ್ಲಿ ಪರರನ್ನು ತನ್ನಂತೆ ಬಗೆಯಬೇಕೆಂಬ ಆತ್ಮದ ಒಳದನಿಯನ್ನೂ ಧಿಕ್ಕರಿಸಿ ತನ್ನಾತ್ಮಕ್ಕೆ ತಾನೇ ವ್ಯತಿರಿಕ್ತವಾಗಿ ಅಧರ್ಮದಲ್ಲಿ ಧುಮ್ಮಿಕ್ಕಿದರೆ ಅಂಥ ಅವಿವೇಕೀಜೀವಕ್ಕೆ ಇನ್ನೆಲ್ಲಿಯದು ಸದ್ಗತಿ?!

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-676 

  Wed 05 Mar 2025  

 Article ends to Kundalsangamdev....it means everything is kundalsangamdev
  Divya Mishra
Varanasi