•  
  •  
  •  
  •  
Index   ವಚನ - 13    Search  
 
ಸಂಸಾರಹೇಯಸ್ಥಲ - ಸಂಸಾರ
ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ, ಎನ್ನುವನು ಕಾಯಯ್ಯಾ, ಕಾಯಯ್ಯಾ! ಹುರುಳಿಲ್ಲ! ಹುರುಳಿಲ್ಲ!! ಕೂಡಲ ಸಂಗಮದೇವಾ, ಶಿವಧೋ! ಶಿವಧೋ!!
Transliteration Sansāravemba baleyalli silukidenayyā, ennuvanu kāyayyā, kāyayyā! Huruḷilla! Huruḷilla!! Kūḍala saṅgamadēvā, śivadhō! Śivadhō!!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Art
English Translation I am caught in the snare of worldly life! Save me! Save me! O Lord! This is futile and meaningless! Alas! Alas! O Lord, Kūḍala Saṅgama!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 Lord, this world Has caught me in its snare ! Save me, O save me, Lord ! All worth is gone, is gone ! Your mercy, Lord, your mercy, Kūḍala Saṅgama ! Translated by: L M A Menezes, S M Angadi
Hindi Translation संसार रूपी जाल में फँसा हूँ, मेरी रक्षा करो, रक्षा करो इसमें सार नहीं, सत्व नहीं, कूडलसंगमदेव पाहि पाहि महादेव ॥ Translated by: Banakara K Gowdappa
Telugu Translation సంసారమను వలలో చిక్కితి నయ్యా! కాపాడు కాపాడు మయ్యా నను; చవిలేదు చవిలేదు సంసారము; శివశివా కూడల సంగమదేవా! Translated by: Dr. Badala Ramaiah
Tamil Translation வாழ்வெனும் வலையிலே வீழ்ந்தே னையனே எனைக் காரு மையனே, எனைக் காரு மையனே. பயனில்லை, பயனில்லை கூடல சங்கம தேவனே, சிவனே, சிவனே. Translated by: Smt. Kalyani Venkataraman, Chennai
Marathi Translation संसाररुपी जाळ्यात अडकलो देवा. मला वाचवा, वाचवा. अर्थहीन ! अर्थहीन ! कूडलसंगमदेवा रक्षावे ! रक्षावे ! Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಲೆಯಲ್ಲಿ ಬೀಳುವುದೆಂದರೆ-ತನ್ನಧೀನ ತಪ್ಪಿ ಪರಾಧೀನದಲ್ಲಿ ಸಿಕ್ಕಿಬೀಳುವುದು. ಹೀಗಾಗಲು ಯಾವುದೋ ಒಂದು ಅನುಕೂಲದ ಆಮಿಷವೂ ಇದ್ದಿರಬಹುದು. ಆದರೆ ಆ ಆಮಿಷದ ಮಿನುಗು ಮಾಸಲು ಬಹಳ ಕಾಲ ಬೇಕಾಗುವುದಿಲ್ಲ. ಆ ವೇಳೆಗೆ ಅಲ್ಲಿಂದ ಪಾರಾಗಲು ತನ್ನ ಪ್ರಯತ್ನವೇನೂ ನಡೆಯದಂತೆ ಕಳ್ಳುಬಳ್ಳಿ ಸುತ್ತಿ ಸನ್ನಿವೇಶ ಬಿಗಿಯಾಗಿರುತ್ತದೆ. ಆಗ ಅದಕ್ಕೆ ಬಲಿಬೀಳುವುದಷ್ಟೇ ಸುಲಭವೆನಿಸುತ್ತದೆ. ಕೂಡಲಸಂಗಮದಿಂದ ಬಂದು ಬಿಜ್ಜಳನ ಊಳಿಗಕ್ಕೆ ಸೇರಿದ ಬಸವಣ್ಣನವರು-ಇಂಥ ಒಂದು ಸಂದರ್ಭವನ್ನು ಎದುರಿಸಿ ದೇವರಿಗೆ ಮೊರೆಯಿಡುತ್ತಿರುವರೆನಿಸುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು