•  
  •  
  •  
  •  
Index   ವಚನ - 14    Search  
 
ಸಂಸಾರಹೇಯಸ್ಥಲ - ಮಾಯೆ
ನಾನೊಂದ ನೆನೆದೊಡೆ ತಾನೊಂದ ನೆನೆವುದು, ನಾನಿತ್ತಲೆಳೆದೊಡೆ ತಾನತ್ತಲೆಳೆವುದು. ತಾ ಬೇರೆ ಎನ್ನನಳಲಿಸಿ ಕಾಡಿತ್ತು, ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು. ಕೂಡಲ ಸಂಗನ ಕೂಡಿಹೆನೆಂದೊಡೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ!
Transliteration Nānonda nenedaḍe tānonda nenevudu, nānittaleḷedaḍe tānattaleḷevudu. Tā bēre ennanaḷalisi kāḍittu, tā bēre enna baḷalisi kāḍittu. Kūḍala saṅgana kūḍ'̔ihenendaḍe tānenna mundugeḍisittu māye.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Vachana Sangama, Singer : Narashima Nayak, Devadra kumar, Manjula Guru, C.S Niramala, Music : Devadra kumar Mudhol, Lable : Ashwini Audio
English Translation 2 I have a thought, it has another ! This way I pull, it pulls that way ! It grates and frets me, too, To toil and moil; And when I long to meet Lord Kūḍala Saṅgama, It casts a darkness on my path, This Māyā ! Translated by: L M A Menezes, S M Angadi
Hindi Translation मैं सोचता कुछ, वह सोचती और कुछ, मैं खींचता इधर, वह खींचती उधर, इसके सिवा वह मुझे खुलाकर सताती है, इसके सिवा वह मुझे थकाकर सताती है, जब कूडलसंगमदेव से मिलना चाहता हूँ तब मुझे पथभ्रष्ट करती है माया ॥ Translated by: Banakara K Gowdappa
Telugu Translation నేనొకటి తలచిన తానొకటి తలచు నే నిట్టు లీడ్వ తానట్టు లీడ్చు తా వేరొచు, నన్నడలించి గారించు తా, వేరొచు, నన్ను విసిగించి వేధించు సంగని సేరుదు మందునా? ముందే నన్ను చెడముంచినది మాయ. Translated by: Dr. Badala Ramaiah
Tamil Translation நானொன்று எண்ணின் தானொன்றெண்ணும் நானிங்கிழுப்பின், தானங்கிழுக்கும், நீ வேறெண்ணி, அழவைத்து அவலமீந்தனை, நீ வேறெண்ணி எவ்வமீந்து, அவலமீந்தனை, கூடல சங்கனைக் கூடுகிறேனெனின் என் மேன்மையை யழித்தது மாயை. Translated by: Smt. Kalyani Venkataraman, Chennai
Marathi Translation मी एक विचार करतो तर ती माया एक विचार करते. मी इकडे ओढतो तर ती तिकडे ओढते. ती मला रडविते, ती मला त्रास देते. कूडलसंगमदेवाला भेटावे तर भेटू देत नाही. मला पथभ्रष्ट केले या मायेने. Translated by Shalini Sreeshaila Doddamani
ಶಬ್ದಾರ್ಥಗಳು ಬಳಲಿಸಿ = ಸೊರಗು; ಮಾಯೆ = ಭ್ರಮೆ;
ಕನ್ನಡ ವ್ಯಾಖ್ಯಾನ ಪರಶಿವೇತರವಾದ ಮತ್ತು ನಾಮರೂಪಧಾರಿಯಾದ-ಆದುದರಿಂದಲೇ ಮಿಂಚಿ ಮಾಯಾವಾಗುವ ಈ ಸಂಸಾರ (ಪ್ರಪಂಚ)ಕ್ಕೆ ಮೂಲಮೃತ್ತಿಕೆಯಾದ ಅವಿದ್ಯೆಯ ಮೂರ್ತಶಕ್ತಿಯೇ ಮಾಯೆ. ಈ ಮಾಯೆ ತನ್ನ ಬಣ್ಣಬೆಡಗಿನಿಂದ-ಶಿವದತ್ತ ಪಯಣಿಸುವ ಜೀವರನ್ನು ತನ್ನತ್ತ ಸೆಳೆದು, ಅವರನ್ನು ತನ್ನಲ್ಲೇ ಇಲ್ಲವಾಗಿಸುವ ಹವ್ಯಾಸದವಳು. ಹೀಗಾಗಿ ಜೀವನು ಬಿಡುಗಡೆಯನ್ನು ಬಯಸಿದರೆ-ಮಾಯೆ ಬಂಧನವನ್ನೂ, ಜೀವನು ಪರದತ್ತ ಸ್ಪಂದಿಸಿದರೆ-ಆ ಮಾಯೆ ನಶ್ವರವನ್ನೂ ವ್ಯಾಮೋಹಕವೆಂಬಂತೆ ಅವನ ಮುಂದೊಡ್ಡಿ-ಅವನನ್ನು ಮುಂದುಗೆಡಿಸುವುದು. ಬರಲಿರುವ ಈ ದುರ್ಗತಿಯನ್ನು ತಿಳಿಯದೆ ಆ ಮಾಯೆಯಲ್ಲೇ ಆಳವಾಗಿ ಹೂತುಹೋಗುವ ಜೀವಗಳೆಷ್ಟೊ ! ಈ ಅಧಃಪಾತವನ್ನು ಬಸವಣ್ಣನವರು ಮನವರಿಕೆಮಾಡಿಕೊಂಡು-ಆ ಮಾಯೆಯಿಂದ ಪಾರಾಗಲು ತಮ್ಮ ಸಾಮರ್ಥ್ಯ ಸರ್ವಸ್ವವನ್ನೂ ಶಿವಧ್ಯಾನಮುಖೇನ ಕ್ರೋಢೀಕರಿಸಿಕೊಳ್ಳುತ್ತ ಗೆಲ್ಲುವ ಛಲಹೊತ್ತು ಈ ವಚನದಲ್ಲಿ ಹಾಡಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು