ಸಂಸಾರಹೇಯಸ್ಥಲ - ಸತ್ವಪರೀಕ್ಷೆ
ಕೊಡೆವಿಡಿಯೆ, ಕುದುರೆಯ ದೃಢವುಳ್ಳ ರಾವುತನೇರಿ,
ಕೊಡೆ ಕೋಟಿ! ಶೂರರು ಹನ್ನಿಬ್ಬರಯ್ಯಾ!
ಚಂದ್ರಕಾಂತದ ಗಿರಿಯ ಗಜ ಬಂದು ಮೂದಲಿಸೆ
ಅರಿದು ಕೊಲುವೊಡೆ ರಿಪುಗಳ ಕಲಿತನವ ನೋಡಾ !
ಆವಿಗೆಯೊಳೊದವಿದ ಪುತ್ಥಳಿಯ ರೂಹಿನಂತೆ ಆಯಿತ್ತು
ಕೂಡಲ ಸಂಗಮದೇವಾ, ನಿನ್ನ ಹೆಸರಿಲ್ಲದ ಹೆಸರು !
Transliteration Koḍeviḍiye, kudureya dr̥ḍhavuḷḷa rāvutanēri,
koḍe kōṭi! Śūraru hannibbarayyā!
Candrakāntada giriya gaja bandu mūdalise
aridu koluvoḍe ripugaḷa kalitanava nōḍā!
Āvigeyoḷodavida put'thaḷiya rūhinante āyittu
kūḍala saṅgamadēvā, ninna hesarillada hesaru!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 A trooper is able enough
To ride a horse
If all he has to do
Is hold a shade !
A billion umbrellas ! but
Only a dozen of the brave !
If an elephant comes and takes his stand
Before a moonstone mount,
Look at the prowess of the foes
To tear and slay !
O Lord Kūḍala Saṅgama,
Your nameless name is now
A doll's shape out of a potter's kiln !
Translated by: L M A Menezes, S M Angadi
Hindi Translation सुदृढ़ योद्धा छत्र धारण कर अश्वारोहण करें
तो कोटि छत्र धारियों में केवल द्वादश शूर हैं ।
चंद्र्कांत गिरि से यदि हाथी भिड ले,
तो भोंककर मारने में शत्रुओं का पराक्रम देखो।
भट्टी में जलाई पुतली के रूप की भाँति है
कूडलसंगमदेव, तव नाम रहित नाम है ॥
Translated by: Banakara K Gowdappa
Telugu Translation గొడుగుపట్ట; గుర్రము నెక్కె దృఢమగు రౌతు;
మంచి కోటి గొడుగులు కాని శూరులు పండ్రెండుమంది;
చంద్రకాంతపు గిరిని కరివచ్చి మూదలింపగ;
ఎరిగి నఱుకు రిపుల శౌర్యము చూడుమ;
ఆవమునగల పుత్తడి రూపమ టై పోయె
కూడల సంగమదేవా! నీ పేరులేని పేరు!
Translated by: Dr. Badala Ramaiah
Tamil Translation குடைபிடியேன், குதிரையை உரனுள பாகன் ஏறி,
கொடை கோடி, திறலுடையோர் பன்னிருவரையனே.
சந்திரகாந்தமலையினை யானை இகழ்ந்து,
அறிந்து வீழ்த்துழி, ஒன்னார் திறலைக்காணாய்!
சூளையிலே வெந்த மட்பாண்ட உருவனையதாம்
கூடல சங்கமதேவனே, உன் பெயரற்ற பெயர்.
Translated by: Smt. Kalyani Venkataraman, Chennai
Marathi Translation
छत्र-चामर सज्जीत घोड्यावर अप्रतिम वीरयोध्दा
दुसऱ्या बाजूला करोडो छत्रामध्ये शुर योध्दा !
चंद्रकांत पर्वताजवळ हत्ती येऊन भिडला.
आपल्याच सावलीशी लढू लागले !
धूराने बनलेल्या बाहूलीप्रमाणे
कूडलसंगमदेवा तुमचे निराकाररुप साकार आहे !
Translated by Shalini Sreeshaila Doddamani
ಶಬ್ದಾರ್ಥಗಳು ಅರಿ = ತಿಳಿವು; ಆವಿಗೆ = ಕುಂಬಾರನ ಒಲೆ; ಕೊಡೆ = ಛತ್ರಿ; ಪುತ್ಥಳಿ = ಗೊಂಬೆ; ಮೂದಲಿಸು = ನಿಂದಿಸು; ರಾವುತ = ಕುದುರೆ ಸವಾರ; ರಿಪು = ಶತ್ರು; ರೂಹು = ರೂಪ; ಹನ್ನಿಬ್ಬರ = ಹನ್ನೆರಡು ಜನ;
ಕನ್ನಡ ವ್ಯಾಖ್ಯಾನ ಶಿವಾಂಶಿಕನಾದ ಜೀವವೀರನು ಈ ದೇಹವನ್ನು ಧರಿಸಿ ಬಂದನೆಂದರೆ ಸಾಕು-ಇಂದ್ರಿಯಗಳ ತಂಡ ತನ್ನ ಕೋಟ್ಯಂತರ ಕಿರುಕುಳಗಳ ದಂಡನ್ನು ಕಟ್ಟಿಕೊಂಡು ಆ ಜೀವನ ಮೇಲೆ ದಾಳಿಗಾರಂಭಿಸುವುದು. ಮತ್ತು ಆ ಜೀವನನ್ನು ಅವನಂತೆ ಶಿವಾಂಶರೇ ಆದ ಇತರ ಜೀವಿಗಳೊಡನೆ ಸೆಣಸಾಟಕ್ಕೆ ತೊಡಗಿಸುವುದು ಕೂಡ.
ಒಂದೇ ಶಿವಶಕ್ತಿಜ್ವಾಲೆಯಿಂದ ಹೊಮ್ಮಿದ ಕಿಡಿಗಳಂತಿರುವ ಈ ಜೀವಜಾಲ ದೇಹಕಾರಣದಿಂದಾಗಿ ಸಂಸಾರದ ಮುದ್ರೆಯನ್ನು ಒತ್ತಿಸಿಕೊಂಡು-ಶಿವನೆಂಬ ತನ್ನ ನಿಜವಾದ ಹೆಸರನ್ನು ನೀಗಿಕೊಂಡು-ತನಗಿಲ್ಲದಸಲ್ಲದ ಜೀವಪಶುವೆಂಬ ಹೆಸರಿಂದ ಅಪಮೌಲ್ಯಗೊಂಡಿರುವುದು.
ಭೂಮಾತೆಯು ಅಗೆಸಿಕೊಂಡು ಮಿದಿಸಿಕೊಂಡು ಕುಂಬಾರನ ಚಕ್ರದಲ್ಲಿ ಸುತ್ತಿಸಿಕೊಂಡು ಬೇಯಿಸಿಕೊಂಡು ಆದ ಗೊಂಬೆಯೊಂದು ಆ ಭೂಮಿಗೂ ತನಗೂ ಸಂಬಂಧವಿಲ್ಲದಂತಿರುವುದನ್ನು ಹೋಲುವುದು-ಪಶುಪತಿಯಿಂದ ಭಿನ್ನವಾದ ಈ ಜೀವಪಶುವಿನ ನಿಲವು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು