•  
  •  
  •  
  •  
Index   ವಚನ - 17    Search  
 
ಸಂಸಾರಹೇಯಸ್ಥಲ - ಮಾಯೆ
ಇಂದಿಗೆಂತು ನಾಳಿಗೆಂತು ಎಂದು ಬೆಂದ ಒಡಲ ಹೊರೆಯ ಹೋಯಿತ್ತೆನ್ನ ಸಂಸಾರ ! ಹಿಂದೆ ನಾನಾಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲಾ; ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲಾ; ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ ಕೊಂದುದಯ್ಯಾ ಈ ಮಾಯೆ, ಕೂಡಲ ಸಂಗಮದೇವಾ.
Transliteration ʼindigentu nāḷigentuʼ endu benda oḍala horeya hōyittenna sansāra! Hinde nānāyōniyalli bandenemba hēyavillā; munde muktiyāgabēkemba yuktiyillā; endendū sadāśivana kundade neneyalīyade kondudayyā ī māye, kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Not knowing what today Or tomorrow may bring, My life is gone, Bearing the burden of its burning flesh ! It knows no shame Of coming through various bygone wombs; It has no thought How, at some future date, it should be free ! O Lord Kūḍala Saṅgama, This Māyā hath undone my life, Never permitting me to love the Lord Without a check Translated by: L M A Menezes, S M Angadi
Hindi Translation आज क्या हो कल क्या हो? कहते तप्त पेट पालने में ही जीवन बीता । इसके पूर्व नाना योनियों में आया, इसकी लाज नहीं । भविष्य में मुक्ति प्राप्ति की युक्ति नहीं, कभी भी सदाशिव को निरातंक जपने न देकर इस मायाने मुझे मार डाला कूडलसंगमदेव ॥ Translated by: Banakara K Gowdappa
Telugu Translation నేటి కెటులో! రేపటి కెటులో; యని వేగు టొడల కావ బోయె నా సంసారము; వెనుక నానా యోనులబడి వచ్చెనను రోత లేదు; ముందు ముక్తి పొందవలెనను యుక్తిలేదు; సదాశివుని స్మరియింళునీక; చంపునయ్యా యీమాయ కూడల సంగమదేవా! Translated by: Dr. Badala Ramaiah
Tamil Translation இன்றைக்கென்று நாளைக்கென்றென்று, வெந்தவுடலைப் பேணுவதில் சென்றதென் வாழ்வு. முன்னே பல பிறவிகளில் பிறந்தேனெனும் வெறுப்பிலை, இன்னும் வீடுபேறு எய்து மறிவுமிலை. என்றென்றும் சதாசிவனைக் குன்றாது எண்ணவொண்ணாது கொல்கிற தையனே இம்மாயை கூடல சங்க தேவனே. Translated by: Smt. Kalyani Venkataraman, Chennai
Marathi Translation पोटाचीतीखळगी, भरावयासाठी आजउद्यापाठी, वेळगेला केलेवायागेले, मागेनानायोनी याचीखंतमनी, नचवाटे पुढेमुक्तीसाठी, कशालातोयुक्ती देवासत्यउक्ती, हीचमाझी संसारचिंतेत, सदाशिवस्मरण घडलेनाहीजाण, दुःखवाटे कूडलसंगमदेवा !मायिकसंसार मजकरीठार, मजवाटे Translated by Rajendra Jirobe, Published by V B Patil, Hirabaug, Chembur, Mumbai, 1983 आजच्यासाठी पाहिजे, उद्यासाठी पाहिजे म्हणत. या अतृप्त पोटासाठी आयुष्यभर कष्ट घेतले. पूर्वी अनेक जन्म घेतला याचे दुःख नाही. पुढे मुक्ती मिळविण्याची युक्तीही नाही. कधीही सदाशिवाचे स्मरण करु दिले नाही. मारले या मायेने, कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಕುಂದದೆ = ಕುಗ್ಗದೆ; ಯುಕ್ತಿ = ಜಾಣ್ಮೆ; ಯೋನಿ = ಜನನೇಂದ್ರಿಯ; ಹೇಯ = ತಿರಸ್ಕಾರ; ಹೊರೆ = ಭಾರ;
ಕನ್ನಡ ವ್ಯಾಖ್ಯಾನ ದಿನದಿನ ಹೊಟ್ಟಿ ಹೊರೆಯುವುದರಲ್ಲೇ ಈ ಜೇವನ ಮುಗಿದಿದೆ. ತಾನು ನಡೆದುಬಂದ ದಾರಿಯೇನು, ಹಿಡಿಯಬೇಕಾದ ಸನ್ಮಾರ್ಗವೇನು ಎಂಬ ಸ್ವವಿಮರ್ಶೆ ಜೀವನಿಗೆ ಸಾಧ್ಯವಾಗುತ್ತಿಲ್ಲ. ಬಂಧನವೇ ಪ್ರಿಯವೆನಿಸಿ, ಬಿಡುಗಡೆಯೇ ಬೇಡವಾಗಿ, ಸಂಸಾರವೇ ಸರ್ವಸ್ವವಾಗಿ-ಶಿವಧ್ಯಾನಕ್ಕೆ ಕಿಂಚಿತ್ತಾದರೂ ತೆರಪಿಲ್ಲವಾಗಿದೆ. ಹೀಗೆ ಮಾಯೆ ನನ್ನನ್ನು ಈ ಸಂಸಾರ ರಣಾಂಗಣದಲ್ಲಿ ಕೊಲ್ಲುತ್ತಿದೆಯೆಂದು ಬಸವಣ್ಣನವರು ದೇವರಲ್ಲಿ ಮೊರೆಯಿಡುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು