•  
  •  
  •  
  •  
Index   ವಚನ - 18    Search  
 
ಸಂಸಾರಹೇಯಸ್ಥಲ - ಮಾಯೆ
ದಿಟ ಪುಟ ಭಕುತಿ ಸಂಪುಟ ನೆಲೆಗೊಳ್ಳದಾಗಿ ಟಿಂಬಕನನಾಡಿಸುತ್ತಿದ್ದಿತಯ್ಯಾ ನಿನ್ನ ಮಾಯೆ, ಟೀವಕ ಟಿಂಬಕನನಾಡಿಸುತ್ತಿದ್ದಿತಯ್ಯಾ ನಿನ್ನ ಮಾಯೆ, ಕೂಡಲ ಸಂಗಮದೇವಯ್ಯಾ, ಹೊನ್ನ ಹೆಣ್ಣ ಮಣ್ಣ ತೋರಿ!
Transliteration Diṭa puṭa bhakuti sampuṭa nelegoḷḷadāgi ṭimbakananāḍisuttidditayyā ninna māye, ṭīvaka ṭimbakananāḍisuttidditayyā ninna māye, kūḍala saṅgamadēvayyā, honna heṇṇa maṇṇa tōri!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Because the firm foundations lack Of a clear faith, This Māyā has me dancing to her tune, She has me dancing to her ding-dong tune, Enticing me with gold, With woman and with land, O Lord Kūḍala Saṅgama ! Translated by: L M A Menezes, S M Angadi
Hindi Translation दृष्ट-पुष्ट भक्ति- संपुट स्थिर न होने से ताल पर नचाती है तव माया, तंत्री नाद पर नचाती है तव माया, कामिनी, कांचन, भूमि,दरसाकर, कूडलसंगमदेव ॥ Translated by: Banakara K Gowdappa
Telugu Translation దృఢమగు భక్తి సిరముగా కుదురమి; టింబకునిగా ఆడిరచుచుండెనయ్యా, నీ మాయ; టింగుటింగున ఆడిరచుచుండెనయ్యా నీ మాయ; కాంతా కాంచన భూముల చూపి కలచునయ్యా కూడల సంగమదేవయ్యా! Translated by: Dr. Badala Ramaiah
Tamil Translation பக்திப்பேழை தூயதாய் மெய்யாயுளது நிலைகொளாது, பெருமூச்சு விட்டதையனே, உன் மாயை, நீண்ட பெருமூச்சு விட்டதையனே உன் மாயை, கூடல சங்கம தேவனே பொன், பெண், மண்ணைக்காட்டி. Translated by: Smt. Kalyani Venkataraman, Chennai
Marathi Translation लिंग-अंग यांची भक्ती समरस झाली नाही तर बोटावर नाचविते तुमची माया, अंगठा दाखवून नाचविते तुमची माया, स्त्री-माती-सोने दाखवून कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಟಿಂಬನನಾಡಿಸು = ದೀರ್ಘ ಶ್ವಾಸ ಉಚ್ಛ್ವಾಸಕ್ಕೆ ಗುರಿಮಾಡು; ಟೀವಕ ಟಿಂಬನನಾಡಿಸು = ತಂತಿ ವಾದ್ಯಕ್ಕೆ ತಕ್ಕಂತೆ ಕುಣಿಸು; ದಿಟ = ಸತ್ಯ;
ಕನ್ನಡ ವ್ಯಾಖ್ಯಾನ ಸತ್ಯಸಂಧತೆಯಿಲ್ಲದುದರಿಂದ-ನಿರಾಡಂಬರವಾದ ನೈಜಭಕ್ತಿಯ ಸರಳಭಾವವಳೆವಡದೆ-ಒಮ್ಮೆ ಹೊನ್ನೆಂದು, ಇನ್ನೊಮ್ಮೆ ಹೆಣ್ಣೆಂದು, ಮತ್ತೊಮ್ಮೆ ಮಣ್ಣೆಂದು ಮರುಳಾಗಿ ಮಾಯೆಯ ಕೈಯಲ್ಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಹಿಗ್ಗಾಮುಗ್ಗ ಎಳೆದಾಡಿಸಿಕೊಂಡು ಸೇದೆಗೊಂಡು ಏದುಸಿರುಬಿಡುತ್ತಿರುವ ಜೀವಪಶುವಿನ ಒಂದು ಶೋಚನೀಯ ಚಿತ್ರ ಈ ವಚನದಲ್ಲಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು