•  
  •  
  •  
  •  
Index   ವಚನ - 21    Search  
 
ಸಂಸಾರಹೇಯಸ್ಥಲ - ಹುಟ್ಟು-ಸಾವು
ಅರಿಯದೆ ಜನನಿಯ ಜಠರದಲ್ಲಿ ಬಾರದ ಭವಂಗಳಲ್ಲಿ ಬರಿಸಿದೆ ತಂದೆ! ಹುಟ್ಟಿತ್ತೇ ತಪ್ಪಾಯಿತ್ತೆ, ಎಲೆ ಲಿಂಗವೇ ? ಮುನ್ನ ಹುಟ್ಟಿದುದಕ್ಕೆ ಕೃಪೆ ಮಾಡು ಲಿಂಗವೇ! ಇನ್ನು ಹುಟ್ಟಿದೆನಾದೊಡೆ, ಕೂಡಲ ಸಂಗಮದೇವಾ, ನಿಮ್ಮಾಣೆ!
Transliteration Ariyade jananiya jaṭharadalli bārada bhavaṅgaḷalli bariside tande! Huṭṭittē tappāyitte, ele liṅgavē? Munna huṭṭidudakke kr̥pe māḍu liṅgavē! Innu huṭṭidenādoḍe, kūḍala saṅgamadēvā, nim'māṇe!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy:
English Translation 2 Father, in my ignorance you brought me through mothers' wombs, through unlikely worlds. Was it wrong just to be born, O lord? Have mercy on me for being born once before. I give you my word, lord of the meeting rivers, never to be born again.

Translated by: A K Ramanujan
Book Name: Speaking Of Siva
Publisher: Penguin Books
----------------------------------
Thou, Father, mad'st me come Blind through my mother's womb- Through undeserving births ! O Liṅga, is it my fault that I was born ? O Liṅga, pray, for former births Grant thy forgiveness ! Should I be born again, Thy curse on me, O Lord Kūḍala Saṅgama ! Translated by: L M A Menezes, S M Angadi

Hindi Translation जननी-जठर में न आने योग्य भवों में हे पिता, इस अनजान को आने दिया क्या जन्म लेना ही अपराध था, लिंगदेव? गत जन्मों के लिए क्षमा करो, आगे जन्म लूँ, तो तव सौगंध है, कूडलसंगमदेव ॥ Translated by: Banakara K Gowdappa
Telugu Translation అరయని జననీ జఠరంబున బడి రారాని జన్మల రప్పింతువే తండ్రీ! పుట్టినదే తప్పయ్యెనే మహాదేవా; ఈ పుట్టుకకు కృపచూడుమో ప్రభూ! ఇక పుట్టితినా నీయాన సంగమ దేవా Translated by: Dr. Badala Ramaiah
Tamil Translation அறியாது தாயின் வயிற்றிலே வாராத பிறவிகளை வருவித்தாய் தந்தையே, பிறந்ததே தவறாயிற்றன்றோ ஓ, இலிங்கமே? முன்பு பிறந்ததற்கு அருள்வாய் இலிங்கமே, இன்னும் பிறந்தேனெனின் கூடல சங்கம தேவனே, உம்மாணை. Translated by: Smt. Kalyani Venkataraman, Chennai
Marathi Translation अज्ञानाने जननीच्या पोटातून येऊ नये अशा भवात जन्माला घातले देवा, जन्माला आलो चूक झाली का लिंगदेवा ! पूर्वी जन्म घेतला म्हणून कृपा करावी लिंगदेवा ! पुन्हा जन्मा घातले तर कूडलसंगमा तुमची शपथ. Translated by Shalini Sreeshaila Doddamani
ಶಬ್ದಾರ್ಥಗಳು ಅರಿ = ತಿಳಿ; ಭವ = ಜನನ ಮರಣ ರೂಪದ ಸಂಸಾರ;
ಕನ್ನಡ ವ್ಯಾಖ್ಯಾನ ಶಿವನೇ, ನೀನು ಆದಿಯಲ್ಲಿ ನಿನ್ನ ಚಿತ್ಕಿರಣವೊಂದನ್ನು ಲೀಲೆಗಾಗಿ ಈ ವಿಶ್ವದಲ್ಲಿ ತೇಲಿಬಿಟ್ಟೆ. ಹಾಗೆ ಅವತರಿಸಿದ ನಾನು ದೇಹೋಹಮೆಂದೇ ನಿಶ್ಚಯಿಸುತ್ತ-ಜನ್ಮಾಂತರಕ್ಕೆ ಬಿದ್ದೆ. ಇದೊಮ್ಮೆಗೆ ಈ ನನ್ನ ತಪ್ಪನ್ನು ಕೃಪೆಯಿಟ್ಟು ಮನ್ನಿಸು-ಇನ್ನು ನಾನು ಈ ಭವದ ಹಾದಿಯನ್ನು ಹಿಡಿಯುವುದಿಲ್ಲ ಎಂದು ಬಸವಣ್ಣನವರು ಕೂಡಲಸಂಗಮನಾಥನಲ್ಲಿ ಕ್ಷಮಾಯಾಚನೆ ಮಾಡುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು