•  
  •  
  •  
  •  
Index   ವಚನ - 22    Search  
 
ಸಂಸಾರಹೇಯಸ್ಥಲ - ಸಂಸಾರ
ಎಂದೋ ಸಂಸಾರದ ದಂದುಗ ಹಿಂಗುವುದು ? ಎಂದೋ, ಮನದಲ್ಲಿ ಪರಿಣಾಮವಹುದೆನಗೆಂದೋ, ಎಂದೋ? ಕೂಡಲ ಸಂಗಮದೇವಾ, ಇನ್ನೆಂದೋ ಪರಮಸಂತೋಷದಲ್ಲಿಹುದೆನಗೆಂದೋ?
Transliteration Endō sansārada danduga hiṅguvudu? Endō, manadalli pariṇāmavahudenagendō, endō? Kūḍala saṅgamadēvā, innendō paramasantōṣadallihudenagendō?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 When shall this trouble of the world Subside ? when shall my mind know peace, Oh, when ? O Lord Kūḍala Saṅgama, When shall I taste the ultimate Bliss ? Translated by: L M A Menezes, S M Angadi
Hindi Translation कब संसार संकट दूर होगा? कब मनः शांति प्राप्त होगी? कूडलसंगमदेव । कब मुझे परम संतोष प्राप्त होगा? Translated by: Banakara K Gowdappa
Telugu Translation ఎపుడో సంసారప తగులంబుడుగుట? ఎపుడో మది పరిపక్వమగుట; ఎపుడో ఇం కెపుడో! కూడలసంగమదేవా! నా కెపుడో పరమానంద మగుట నా కెపుడో! Translated by: Dr. Badala Ramaiah
Tamil Translation என்று வாழ்வின் இடர்நீங்கும்? என்றுஎன்மனம் கழிபேருவகையால் நிறையும்? என்று? கூடல சங்கமதேவனே. இன்னும் நிறைமகிழ்வு எய்துவது எனக்கென்றோ? Translated by: Smt. Kalyani Venkataraman, Chennai
Marathi Translation केव्हा या संसाराचे दुःख दूर होणार? केव्हा मनाला शांती लाभणार ? केव्हा कूडलसंगमदेवा? आता केव्हा परम संतोषाचे भाग्य लाभणार ? Translated by Shalini Sreeshaila Doddamani
ಶಬ್ದಾರ್ಥಗಳು ದಂದುಗ = ದುಃಖ;
ಕನ್ನಡ ವ್ಯಾಖ್ಯಾನ ಸಂಸಾರದ ಗುಣವೇ ದುಃಖ. ಈ ದು:ಖ ನಿವಾರಣೆಯಾದರೆ-ಜೀವನ ಮನಸ್ಸು ಸ್ವಸ್ಥವಾಗುವುದು. ಶಿವಧ್ಯಾನಕ್ಕೆ ಇನ್ನೊಂದು ಹೆಸರಾದ ಈ ಸ್ವಸ್ಥತೆಯಿಂದ ಜೀವನು ಉದಾತ್ತವಾಗುವನು. ಆ ಉದಾತ್ತಸ್ಥಿತಿಯಲ್ಲಿ ಅವನಿಗೆ ಭ್ರಮೆಗಳೆಲ್ಲಾ ಕ್ಷುದ್ರವೆನಿಸಿ-ಮನಸ್ಸು ಶಿವದಲ್ಲಿ ಲೀನವಾಗುವುದು-ಅದೇ ಶಿವಾನಂದ. ಆ ಶಿವಾನಂದವೇ ಪರಮಸಂತೋಷ. ಆ ಪರಮಸಂತೋಷಸ್ಥಿತಿ ತನಗೆ ಎಂದಿಗಾಗುವುದೆಂದು ಬಸವಣ್ಣನವರು ಹಂಬಲಿಸುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು