•  
  •  
  •  
  •  
Index   ವಚನ - 23    Search  
 
ಸಂಸಾರಹೇಯಸ್ಥಲ - ಅನುಗ್ರಹ
ಲೇಸ ಕಂಡು ಮನ ಬಯಸಿ ಬಯಸಿ ಆಸೆ ಮಾಡಿದೊಡಿಲ್ಲ ಕಂಡಯ್ಯಾ! ತಾಳಮರಕ್ಕೆ ಕೈಯ ನೀಡಿ ಮೇಲೆ ನೋಡಿ ಗೋಣು ನೊಂದುದಯ್ಯಾ! ಕೂಡಲ ಸಂಗಮದೇವ, ಕೇಳಯ್ಯಾ, ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ !
Transliteration Lēsa kaṇḍu mana bayasi bayasi āse māḍidoḍilla kaṇḍayyā! Tāḷamarakke kaiya nīḍi mēle nōḍi gōṇu nondudayyā! Kūḍala saṅgamadēva, kēḷayyā, nīnīva kālakkalladilla kaṇḍayyā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If seeing the Good, the spirit yearns And yearns, it will not quench Your thirst. If holding out your hand Towards a palmyra fruit, You upward look, your neck Will surely hurt, dear Sir ! Hear me, Lord Kūḍala Saṅgama, It's never to be had Unless you give ! Translated by: L M A Menezes, S M Angadi
Hindi Translation भलाई देख मन चाह-चाहकर आशा करे, तो लाभ नहीं ताल - वृक्ष की ओर हाथ पसारकर ऊपर देखने से गला दुखता है, ध्यान दो कूडलसंगमदेव , तुम्हारे नहीं देने तक मुझे कुछ नहीं मिल सकता ॥ Translated by: Banakara K Gowdappa
Telugu Translation మంచిచూచి మది దలచితలచి ఆశపడ ఫలములేదురా; తాటి చెట్టుకు చేయి సాచి మిన్నుచూడ మెడ పడిపోవురా! వినుమయ్యా; సంగయ్యా! నీవు ఇచ్చు నాటికి లేనిది లేదయ్యా ! Translated by: Dr. Badala Ramaiah
Tamil Translation நல்லதைக் கண்டு மனம் நயந்து, நயந்து விரும்பின் இல்லை கண்டாயையனே. பனைமரத்திற்குக் கையினை நீட்டி, அண்ணாந்து கழுத்து நொந்ததையனே. கூடலசங்கமதேவனே; கேளாயையனே. நீ ஈயுங்காலை அல்லதில்லை கண்டாயையனே. Translated by: Smt. Kalyani Venkataraman, Chennai
Marathi Translation चांगले पाहून मन लालची होऊन आशा केली तर मिळत नाही. ताडाच्या झाडाकडे हात पसरुन, वर पाहून माझी मान दुखू लागली. कूडलसंगमदेवा ऐकावे, आपण द्याल तेव्हा मला मिळणार. Translated by Shalini Sreeshaila Doddamani
ಶಬ್ದಾರ್ಥಗಳು ಗೋಣು = ಕುತ್ತಿಗೆ; ಲೇಸ = ಒಳ್ಳೆಯದು;
ಕನ್ನಡ ವ್ಯಾಖ್ಯಾನ ಮೇಲೆ ವಿವರಿಸಿದ ಪರಮಸಂತೋಷವನ್ನು ಪಡೆಯುವ ಬಯಕೆ ಬಸವಣ್ಣನವರಿಗೆ-ಆತ್ಮಾನಂದ ಲೀನರಾದ ಶರಣರನ್ನು ಕಂಡಾಗಲೆಲ್ಲ ಮರುಕಳಿಸುತ್ತಲೇ ಇತ್ತು.ಆದರೆ ಅದು ಸ್ಥಾಯಿಯಾಗದೆ ಎಟುಕದ ಎತ್ತರದಲ್ಲಿದ್ದಂತೆ ಭಾಸವಾಗುತ್ತಿತ್ತು. ಎತ್ತರವಾದ ತಾಳೆಯ ಮರದ ಕೆಳಗೆ ಕುಳ್ಳನೊಬ್ಬನು ಅದರ ಹಣ್ಣುಗಳತ್ತ ತನ್ನ ಗಿಡ್ಡ ಕೈಗಳನ್ನು ಚಾಚಿ ನಿಮಿರುವ ನಗೆಪಾಟಲಿನ ಚಿತ್ರ ತಮ್ಮದಾಗಿ ಬಸವಣ್ಣನವರಿಗೆ ನೆನಪಾಗುತ್ತಿತ್ತು. ಆಗ ಅವರು ತಮ್ಮ ಬಯಸಿದ ಪರಮಸಂತೋಷಪ್ರಾಪ್ತಿಗೆ ಕೇವಲ ತಮ್ಮ ಪ್ರಯತ್ನ ಸಾಲದೆಂದು-ಜೊತೆಗೆ ತಮ್ಮ ಮೇಲೆ ಮತ್ತಷ್ಟು ಶಿವಕೃಪೋದಯವಾಗುವ ಮುಹೂರ್ತವೂ ಕೂಡಿಬರಬೇಕೆಂದು ಚಿತ್ತಕ್ಕೆ ಸಮಾಧಾನ ತಂದುಕೊಳ್ಳತ್ತ-ಆ ಹೆಚ್ಚಿನ ಶಿವಕೃಪೆಗಾಗಿ ತಾವು ಪಾತ್ರರೆನಿಸಲು ತಕ್ಕ ಸಾಧನೆಯಲ್ಲಿ ಮೊದಲಿಗಿಂತಲೂ ಮಿಗಿಲಾಗಿಯೇ ತೊಡಗುತ್ತಿದ್ದರು. ಅಂದರೆ ನಮ್ಮ ಅಭೀಪ್ಸೆಗಳು ನಿಷ್ಕ್ರಿಯವಾದ ಬಯಕೆಗಳಾಗಿದ್ದರೆ ಸಾಲದು-ಅವು ಸಕ್ರಿಯವಾದ ಆಕಾಂಕ್ಷೆಗಳಾಗಬೇಕು-ಇಲ್ಲದಿದ್ದರೆ ಹತ್ತಿ ಕೀಳಬೇಕಾದ ಹಣ್ಣುಗಳ ಕಡೆ ಕೆಳಗೇ ನಿಂತು ಕೈಚಾಚಿ ಗೋಣು ನೋಯಿಸಿಕೊಂಡ ಗುಜ್ಜನಂತೆ ಹಾಸ್ಯಾಸ್ಪದವಾಗುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು