ಮುನ್ನ ಮಾಡಿದ ಪಾಪ ಬೆನ್ನ ಬಿಡದನ್ನಕ್ಕ
ಇನ್ನು ಬಯಸಿದರುಂಟೆ ?
ಭಕ್ತಿಯುಳ್ಳವರ ನೋಡಿ ನೋಡಿ ಬಯಸಿದರುಂಟೇ
ಕೂಡಲ ಸಂಗಮದೇವರಲ್ಲಿ
ಮುನ್ನ ವರವ ಹಡೆಯದನ್ನಕ್ಕ?
Transliteration Munna māḍida pāpa benna biḍadannakka
innu bayasidaruṇṭe?
Bhaktiyuḷḷavara nōḍi nōḍi bayasidaruṇṭē
kūḍala saṅgamadēvaralli
munna varava haḍeyadannakka?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 What does it help to yearn
And yearn again,
Unless your fore-committed sin
Has ceased to chase you ?
What helps to gaze and gaze
Upon the men of God,
Unless you have obtained
The gift, already, from the Lord
Kūḍala Saṅgama ?
Translated by: L M A Menezes, S M Angadi
Hindi Translation पूर्व कृत पाप न छूटने तक
अब आशा करने से क्या होगा?
भक्तों को देख देख कर
आशा करने से क्या होगा ?
कूडलसंगमदेव से पहले ही
वर प्राप्त न करने तक?
Translated by: Banakara K Gowdappa
Telugu Translation మునుచేసిన పాపము విడనంతదాక వెన్ను;
ఆశపడ వచ్చునే మతి?
భక్తి గలవారల చూచి చూచి ఆశింప ఫలించునే?
కూడల సంగమ దేవుని ముందు;
ముందె వరమందకున్న.
Translated by: Dr. Badala Ramaiah
Tamil Translation முதலிலே செய்த தீவினை தொடரும் போழ்து
இன்னும் விரும்பி னுண்டோ?
பக்தியுள்ளோரைக் கண்டுகண்டு நயந்தாலுமுண்டோ
கூடலசங்கம தேவனிடத்திலே முன்னே பேறெய்தும் வரை.
Translated by: Smt. Kalyani Venkataraman, Chennai
Marathi Translation
पूर्वी केलेले पाप पाठ सोडीत नाही,
आता इच्छा केल्याने मिळणार आहे काय ?
भक्ती करणाऱ्या पाहून इच्छा
केल्याने मिळणार आहे?
प्रथम कूडलसंगाचे वरदान प्राप्त करेपर्यंत ?
Translated by Shalini Sreeshaila Doddamani
ಶಬ್ದಾರ್ಥಗಳು ಮುನ್ನ = ಮೊದಲು; ಹಡೆಯ = ಗಳಿಸಿದ;
ಕನ್ನಡ ವ್ಯಾಖ್ಯಾನ ಭಕ್ತಿಯಲ್ಲಿ ನಡೆಯುವ ಸಾಧಕನಿಗೆ-ತನ್ನ ಮಾರ್ಗ ಸುಗಮವಲ್ಲವೆನಿಸಿದರೆ-ಅದಕ್ಕೆ ಕಾರಣವನ್ನು ಅವನು ತನ್ನಲ್ಲಿಯೇ ಹುಡುಕಿಕೊಳ್ಳಬೇಕು. ತನ್ನ ಹಿಂದಿನ ಜನ್ಮಗಳಲ್ಲಾಗಲಿ, ಅಥವಾ ದೀಕ್ಷಾಬದ್ದನಾಗುವುದಕ್ಕೆ ಮೊದಲ ಪೂರ್ವಾಶ್ರಮದಲ್ಲಾಗಲಿ-ತಾನು ತಳೆದ ತಾಮಸ, ಮಾಡಿದ ಆಕೃತ್ಯಗಳೇ ತನ್ನ ಪ್ರಸ್ತುತ ಹಿಂಜರಿತಕ್ಕೆ ಕಾರಣವೆಂಬುದು ಬಸವಣ್ಣನವರ ನಂಬಿಕೆ.
ಒಬ್ಬನು ಆಧ್ಯಾತ್ಮಿಕತೆಯನ್ನು ಸುಲಭವಾಗಿ ಪಡೆಯುವನು-ಇನ್ನೊಬ್ಬನು ಎಷ್ಟೇ ಪ್ರಯತ್ನದಿಂದಲಾದರೂ-ಅದನ್ನು ರೂಢಿಸಿಕೊಳ್ಳಲಾಗದೆ ಮರಳಿ ಮರಳಿ ಹತಾಶನಾಗುತ್ತಿರುವನು.
ವ್ಯಕ್ತಿಯಿಂದ ವ್ಯಕ್ತಿಗಿರುವ ಈ ತಾರತಮ್ಯಕ್ಕೆ ಕಾರಣ ಅವನ ಪೂರ್ವಜನ್ಮದ ಅಥವಾ ಪೂರ್ವ ಜೀವನದ ಕರ್ಮಫಲವೇ ಆಗಿದೆ. ಆದುದರಿಂದಲೇ ದಿವ್ಯಜೀವನದಲ್ಲಿ ನಿರಾತಂಕವಾಗಿ ಪ್ರಗತಿ ಸಾಧಿಸುವ ಸಂತರನ್ನು ಕಂಡು ನಾವು ಕರುಬಿದರಾಗದು-ಅವರಂತೆ ನಾವೂ ಪಡೆದುಬಂದವರಾಗಿರಬೇಕೆಂದು-ಆತ್ಮಕ್ಕೆ ಪ್ರತಿಕೂಲವಾದ ತಮ್ಮ ದೇಹಮನಗಳ ಅಂಕುಡೊಂಕುಗಳನ್ನು ಕುರಿತು ಬಸವಣ್ಣನವರು ವಿಷಾದಿಸುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು